October 2, 2026
Friday, October 2, 2026
spot_img

FOOD | ಕ್ಲಾಸಿಕ್ ಮಹಾರಾಷ್ಟ್ರಿಯನ್ ಸ್ನ್ಯಾಕ್ ಭಾಕರ್ವಾಡಿ ತಿಂದಿದ್ದೀರಾ? ಮನೆಯಲ್ಲೇ ಮಾಡ್ಬಹುದು

ಚಹಾ ಕುಡಿಯೋ ಸಮಯ, ಖಾರ-ಸಿಹಿ ತಿಂಡಿ ನೆನಪಾದಾಗ ಭಾಕರ್ವಾಡಿ ಟ್ರೈ ಮಾಡಿ. ಇದು ಮಹಾರಾಷ್ಟ್ರ ಮೂಲದ ಈ ರುಚಿಕರ ತಿಂಡಿ. ಮನೆಲ್ಲೇ ಸರಳವಾಗಿ ತಯಾರಿಸಬಹುದಾದ ಈ ಭಾಕರ್ವಾಡಿ, ನೀವೂ ಒಮ್ಮೆ ಮಾಡಿ ತಿನ್ನಿ.

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟಿಗೆ:

ಮೈದಾ – 1 ಕಪ್
ಕಡಲೆ ಹಿಟ್ಟು – 2 ಟೇಬಲ್ ಸ್ಪೂನ್
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ
ಎಣ್ಣೆ – 2 ಟೇಬಲ್ ಸ್ಪೂನ್
ನೀರು – ಅಗತ್ಯವಷ್ಟು

ಹೂರಣಕ್ಕೆ:

ತುರಿದ ತೆಂಗು (ಒಣ) – ½ ಕಪ್
ಗಸಗಸೆ – 1 ಟೇಬಲ್ ಸ್ಪೂನ್
ಎಳ್ಳು – 1 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲೆ – ½ ಟೀ ಸ್ಪೂನ್
ಸಕ್ಕರೆ ಪುಡಿ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ
ನಿಂಬೆ ರಸ/ಅಮ್ಚೂರ್ – ಸ್ವಲ್ಪ

ತಯಾರಿಸುವ ವಿಧಾನ

ಮೈದಾ, ಕಡಲೆ ಹಿಟ್ಟು, ಉಪ್ಪು, ಅರಿಶಿನ ಮತ್ತು ಎಣ್ಣೆ ಸೇರಿಸಿ ಗಟ್ಟಿಯಾದ ಹಿಟ್ಟನ್ನು ಕಲಸಿ 20 ನಿಮಿಷ ಮುಚ್ಚಿಡಿ.

ಹೂರಣದ ಪದಾರ್ಥಗಳನ್ನು ಸ್ವಲ್ಪ ಹುರಿದು ತಣ್ಣಗಾದ ಮೇಲೆ ಮಿಶ್ರಣ ಮಾಡಿ.

ಹಿಟ್ಟನ್ನು ತೆಳುವಾಗಿ ಚಪಾತಿಯಂತೆ ಲಟ್ಟಿಸಿ, ಮೇಲೆ ಹೂರಣ ಹಚ್ಚಿ ರೋಲ್ ಮಾಡಿ.

ಸಣ್ಣ ತುಂಡುಗಳಾಗಿ ಕತ್ತರಿಸಿ, ಮಧ್ಯಮ ಉರಿಯಲ್ಲಿ ಎಣ್ಣೆಯಲ್ಲಿ ಕರಿಯಿರಿ.

Must Read