ಹೊಸದಿಗಂತ ವರದಿ ಬೇಲೂರು:
ಇಂದು ಮಂಗಳವಾರ ಸಂಭವಿಸುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆ ಯಲ್ಲಿ ಶ್ರೀಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಕಾರ್ಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಮಾ. 3, 2026 ಮಂಗಳವಾರ ನಡೆಯುವ ಗ್ರಹಣವು ಮಧ್ಯಾಹ್ನ 3:30ರಿಂದ ಸಂಜೆ 6:47ರವರೆಗೆ ಇರು ವುದರಿಂದ, ಆ ದಿನದ ನಿತ್ಯಪೂಜೆ ಬೆಳಗ್ಗೆ 9 ಗಂಟೆಗೆ ಪೂರ್ಣಗೊಳ್ಳಲಿದೆ. 9:0ಗಂಟೆಗೆ ಮುಂಚೆಯೇ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಗ್ರಹಣಾಂತ್ಯದ ಬಳಿಕ ಸಂಜೆ 7 ಗಂಟೆಯ ನಂತರ ಶುದ್ಧಿ, ಪುಣ್ಯಾಹ, ಆಲಯಾರ್ಚನೆ, ಅಂತರಂಗ ಅಭಿಷೇಕ ಹಾಗೂ ಸಂಪ್ರೋಕ್ಷಣೆ ವಿಧಿಗಳು ನೆರವೇರಿಸಲ್ಪಟ್ಟು, ಮಹಾ ನೈವೇದ್ಯ ಸಮರ್ಪಿಸ ಲಾಗುತ್ತದೆ. ಆದರೆ ರಾತ್ರಿ 7:30ಕ್ಕೆ ಮಹಾದ್ವಾರ ಮುಚ್ಚಲಾಗುವ ಕಾರಣ, ಆ ರಾತ್ರಿ ಭಕ್ತರಿಗೆ ದರ್ಶನದ ಅವಕಾಶ ಇರುವುದಿಲ್ಲ.
ಇದನ್ನೂ ಓದಿ:
ಮಾ.4 ಬೆಳಗ್ಗೆ ಎಲ್ಲ ಭಕ್ತಾದಿಗಳಿಗೆ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಗರ್ಭಗುಡಿ ಮಾತ್ರ ಮುಚ್ಚಲ್ಪಡುವುದ ರಿಂದ, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ದೇವಾಲಯದ ಶಿಲ್ಪಕಲೆಯನ್ನು ವೀಕ್ಷಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಹಣ ಕಾಲದಲ್ಲಿ ಶಾಂತಿಗಾಗಿ ಪೂಜೆ ಮಾಡಿ ಸುವವರು ಹುರುಳಿ ಹಾಗೂ ಅಕ್ಕಿ ದಾನ ನೀಡಿ ಸಮರ್ಪಣೆ ಮಾಡಿದರೆ ಗ್ರಹಣದೋಷ ನಿವಾ ರಣೆಗೆ ಶಾಂತಿ ಲಭಿಸುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಭಕ್ತಾದಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.



