March 3, 2026
Tuesday, March 3, 2026
spot_img

ಕರಾವಳಿಗೂ ಯುದ್ಧ ಬಿಸಿ: ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಎಲ್ಲ ವಿಮಾನ ಸೇವೆ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನ ಸಂಚಾರ ಮಾರ್ಚ್ 4ರವರೆಗೆ ರದ್ದುಗೊಂಡಿದೆ.

ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.


ಮಾರ್ಚ್ 3 ರಂದು ಮಂಗಳೂರು-ದೋಹಾ (IX 821), ದೋಹಾ-ಮಂಗಳೂರು (IX 822), ಮಂಗಳೂರು-ದುಬೈ (IX 813), ಮಂಗಳೂರು-ಕುವೈತ್ (IX 851), ಮಂಗಳೂರು-ದಮ್ಮಾಮ್ (IX 847), ಮತ್ತು ಮಂಗಳೂರು-ಅಬುಧಾಬಿ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಮಾರ್ಚ್ 4 ರಂದು ದುಬೈ-ಮಂಗಳೂರು (IX 814), ಕುವೈತ್-ಮಂಗಳೂರು (IX 852), ದಮ್ಮಾಮ್-ಮಂಗಳೂರು (IX 848), ಮತ್ತು ಅಬುಧಾಬಿ-ಮಂಗಳೂರು (IX 816) ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದುವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !