March 4, 2026
Wednesday, March 4, 2026
spot_img

ಕತಾರ್‌ನಲ್ಲಿ ಶಂಕಿತ ಐಆರ್‌ಜಿಸಿ ಗೂಢಚಾರರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕತಾರ್‌ನಲ್ಲಿ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ನ ಗೂಢಚಾರರು ಎನ್ನುವ ಶಂಕೆಯ ಮೇಲೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಬೇಹುಗಾರಿಕೆ ಆರೋಪ ಹೊತ್ತಿರುವ ಇತರ ಮೂವರು ಡ್ರೋನ್‌ಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದರು ಎಂದು ವರದಿಯಾಗಿದೆ. ತನಿಖೆ ಸಮಯ ಇವರು ಐಆರ್‌ಜಿಸಿ ಸಂಪರ್ಕದಲ್ಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ.

ತಾವು ಬೇಹುಗಾರಿಕೆ ಹಾಗೂ ವಿಧ್ವಂಸಕ ಕಾರ್ಯಗ್ರಳನ್ನು ನಡೆಸಲು ತಯಾರಿ ನಡೆಸಿದ್ದೆವು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಮೊದಲ ಸರ್ವೋಚ್ಚ ನಾಯಕ ರುಹೊಲ್ಲಾ ಖೊಮೇನಿ ಈ ಪಡೆಯನ್ನು ಸ್ಥಾಪಿಸಿದರು. ಕೇವಲ ದೇಶದ ಗಡಿ ಕಾಯುವುದು ಇದರ ಕೆಲಸವಲ್ಲ, ಬದಲಿಗೆ ಇರಾನ್‌ನ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !