March 5, 2026
Thursday, March 5, 2026
spot_img

ದಿನಭವಿಷ್ಯ: ನಿಮ್ಮ ಕೆಲಸದಲ್ಲಿ ಇರೋ ಟೆನ್ಶನ್ ಇವತ್ತು ಮಾಯ ಆಗುತ್ತೆ, ಫ್ರೆಂಡ್ಸ್ ಜೊತೆ ಹ್ಯಾಪಿ ಟೈಮ್

ಮೇಷ
ಹೊಸ ಪಾಲುದಾರಿಕೆ ಲಾಭ ತಂದೀತು. ಆದರೆ ನಂಬಿಗಸ್ಥರ ಜತೆ ವ್ಯವಹಾರ ನಡೆಸಿ. ಸಂಬಂಧದಲ್ಲಿ ಉದ್ವಿಗ್ನತೆ. ಹೊಂದಾಣಿಕೆ ಮುಖ್ಯ.
ವೃಷಭ
ಸಾಧನೆಯ ದಿನ. ವ್ಯವಹಾರದಲ್ಲಿ ಸಫಲತೆ. ಕೆಲಕಾಲದಿಂದ ಕಾಡುತ್ತಿದ್ದ ಚಿಂತೆ ಪರಿಹಾರ. ವಿದ್ಯಾರ್ಥಿಗಳಿಗೆ ಶುಭ ಬೆಳವಣಿಗೆ.
ಮಿಥುನ
ಸಂಗಾತಿ ಜತೆ ಸಂಘರ್ಷ ನಡೆದೀತು. ಅವರ ದೃಷ್ಟಿಕೋನ ಕೂಡಾ ಪರಾಮರ್ಶಿಸಿ. ಸ್ನೇಹಿತರ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಒತ್ತಡ.
ಕಟಕ
ನಿಮ್ಮ ಭಾವನೆ, ಮನಸ್ಥಿತಿ ಆಪ್ತರ ಜತೆ ಹಂಚಿಕೊಳ್ಳಿ. ಇದರಿಂದ ಮನಸ್ಸು ಹಗುರ. ಸುಮ್ಮನೇ ಕೊರಗುತ್ತಾ ಕೂರಬೇಡಿ.
ಸಿಂಹ
ಅಡ್ಡಿಗಳನ್ನು ನಿವಾರಿಸಿಕೊಂಡು ವಿಳಂಬವಿಲ್ಲದೆ ಕಾರ್ಯ ಎಸಗುವಿರಿ. ಆರ್ಥಿಕ ಸ್ಥಿರತೆ. ವೃತ್ತಿ ಒತ್ತಡ ನಿವಾರಣೆಯಾಗಲಿದೆ.
ಕನ್ಯಾ
ಸಣ್ಣಪುಟ್ಟ ಜಗಳದಲ್ಲಿ ತೊಡಗಿಕೊಳ್ಳಬೇಡಿ. ಅದರಿಂದ ಮನಸ್ಸಿನ ನೆಮ್ಮದಿ ಹಾಳು. ವೃತ್ತಿಯಲ್ಲಿ ಹೊಸ ಅವಕಾಶ. ಸ್ನೇಹದಲ್ಲಿ ಬಿರುಕು.
ತುಲಾ
ಹೆಚ್ಚುವರಿ ಹೊಣೆಗಾರಿಕೆ ಒತ್ತಡ ಸೃಷ್ಟಿಸಲಿದೆ. ದುಡುಕಿನ ನಿರ್ಧಾರ ತಾಳದಿರಿ. ಖರೀದಿಯ ಉತ್ಸಾಹಕ್ಕೆ ಕಡಿವಾಣ ಹಾಕಿ.
ವೃಶ್ಚಿಕ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ವಿದ್ಯಾರ್ಥಿಗಳಿಗೆ ಯಶ. ಸಾಧನೆಯ ತೃಪ್ತಿ.
ಧನು
ಮನೆಯವರ ಜತೆ ಉತ್ತಮ ಹೊಂದಾಣಿಕೆ. ಭಿನ್ನಮತ ನಿವಾರಣೆ. ವದಂತಿಗಳಿಗೆ ಹೆಚ್ಚು ಕಿವಿಗೊಡಬೇಡಿ. ನಿಮ್ಮ ಕೆಲಸ ಮಾಡುತ್ತಿರಿ.
ಮಕರ
ಕಾಲಮಿತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಯಾವುದೇ ವಿಘ್ನ ಬಾಧಿಸದು. ಕೌಟುಂಬಿಕ ಸಂತೃಪ್ತಿ. ವಿದ್ಯಾರ್ಥಿಗಳ ಆಶಯ ಪೂರೈಸಲಿದೆ.
ಕುಂಭ
ನಿಶ್ಚಿತ ಸಮಯದಲ್ಲಿ ಕೆಲಸ ಪೂರೈಸಲು ವಿಫಲ. ಇದರಿಂದ ಒತ್ತಡ ಹೆಚ್ಚಳ. ವಿದ್ಯಾರ್ಥಿಗಳಿಗೆ ಈ ದಿನ ಕಠಿಣವಾದೀತು. ಹೆಚ್ಚು ಪರಿಶ್ರಮ ಅಗತ್ಯ.
ಮೀನ
ಆಸ್ತಿ ಅಥವಾ ವಸ್ತು ಮಾರಾಟಕ್ಕೆ ಉದ್ದೇಶಿಸಿದ್ದರೆ ನೀವು ಇಚ್ಛಿಸಿದ ಬೆಲೆ ದೊರಕದು. ಕೌಟುಂಬಿಕ ಪರಿಸರ ಶಾಂತ. ಮಕ್ಕಳ ಸಾಧನೆಯಿಂದ ತೃಪ್ತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !