July 17, 2026
Friday, July 17, 2026
spot_img

SHOCKING | ಸೆಕೆ ಅಂತ ಮಕ್ಕಳಿಗೆ ಕುಡಿಸ್ತಿರೋದು ಕೂಲ್‌ ಡ್ರಿಂಕ್ಸ್‌ ಅಲ್ಲ, ಕೂಲ್‌ ಡ್ರಿಂಕ್ಸ್‌ ಹೆಸರಿನ ʼವಿಷʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ಆಕರ್ಷಿಸೋಕೆ ಅಂತಲೇ ಬಣ್ಣ ಬಣ್ಣದ ಕೂಲ್‌ ಡ್ರಿಂಕ್ಸ್‌ನ್ನು ಅಂಗಡಿಯ ಮುಂಭಾಗದ ಫ್ರಿಡ್ಜ್‌ನಲ್ಲೇ ಇಟ್ಟುಕೊಳ್ತಾರೆ. ಅದನ್ನು ನೋಡಿದ ಮಕ್ಕಳು ಕಾಟ ಕೊಟ್ಟಾದರೂ ನಿಮ್ಮನ್ನು ಕನ್ವಿನ್ಸ್‌ ಮಾಡ್ತಾರೆ. ಹೋಗ್ಲಿಬಿಡು ಎಂದು ಒಂದು ಬಾಟಲಿ ಕೊಡಿಸುತ್ತೀರಿ. ಆದರೆ ಮಕ್ಕಳ ಹೊಟ್ಟೆಗೆ ಹೋಗ್ತಿರೋದು ಹಣ್ಣಿನ ರಸ ಅಲ್ಲ, ಕೆಮಿಕಲ್ಸ್‌ ಅರ್ಥಾತ್‌ ವಿಷ!!

ಬೇಸಿಗೆ ಅಂದಮೇಲೆ ಸಾಮಾನ್ಯವಾಗಿ ಕಾಣುವ ಬಣ್ಣದ ಕೂಲ್‌ಡ್ರಿಂಕ್‌ಗಳನ್ನು ಮಕ್ಕಳಿಗೆ ನೀಡಬೇಡಿ. ಯಾಕೆಂದರೆ ಇದರಲ್ಲಿ ವಿಷಕಾರಿ ಅಂಶಗಳು ಇರುವ ಗಂಭೀರ ಶಂಕೆ ವ್ಯಕ್ತವಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳುವಂತೆ ಔಷಧ ನಿಯಂತ್ರಣ ಇಲಾಖೆಗೆ ಮನವಿ ಮಾಡಿದೆ. ವಿಷಕಾರಿ ಅಂಶ ಮಕ್ಕಳ ಆರೋಗ್ಯಕ್ಕೆ ಹಾನಿಕರವಾಗಿದೆ, ತನಿಖೆ ನಡೆಸಿ ಎಂದು ತಿಳಿಸಿದೆ. ತಂಪುಪಾನೀಯಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಇಲಾಖೆಯು ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !