March 5, 2026
Thursday, March 5, 2026
spot_img

ಕಾರಲ್ಲಿ ಎಣ್ಣೆ ಪಾರ್ಟಿ ಮಾಡೋರಿಗೆ ಶಾಕ್ ಕೊಟ್ಟ ಬೆಳಗಾವಿ ಖಾಕಿ ಪಡೆ

ಹೊಸದಿಗಂತ ವರದಿ ಬೆಳಗಾವಿ:

ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಖಾಕಿ ಪಡೆ ಶಾಕ್ ನೀಡಿದ್ದಾರೆ.‌

ರಸ್ತೆ ಪಕ್ಕ ಕಾರು ನಿಲ್ಲಿಸಿ ಅಕ್ರಮವಾಗಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳುವುದಕ್ಕೆ ಪೊಲೀಸರು ಸಿದ್ದರಾಗಿದ್ದಾರೆ. ಬೆಳಗಾವಿ ಮಹಾನಗರದಲ್ಲಷ್ಟೇ ಈವರೆಗೆ ಕಾರಿನಲ್ಲಿಯೇ ಮಧ್ಯ ಸೇವನೆ ಮಾಡುತ್ತಿರುವ 24 ಪ್ರಕರಣಗಳು ದಾಖಲಾಗಿವೆ. ಒಂದು ವಾರದಲ್ಲಿ 24 ಪ್ರಕರಣಗಳ ಪೈಕಿ 36 ಜನರ ವಿರುದ್ಧ ಮಹಾನಗರ ಪೊಲೀಸರು ಕೇಸ್‌ ದಾಖಲಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕ ಸ್ಥಳ, ಕಾರು, ಜಮೀನು, ಮೈದಾನ ಸೇರಿದಂತೆ ವಿವಿಧೆಡೆ ಪಾರ್ಟಿ ಮಾಡ್ತಿದ್ದವರಿಗೆ ಈ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್ ಇರುವಾಗಲೂ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದವರಿಗೆ ಹಾಗೂ ರಸ್ತೆ ಪಕ್ಕ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುವವರಿಗೂ ಸಹ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದಾರೆ.

ಇದನ್ನೂ ಓದಿ:

ರಸ್ತೆ ಅಕ್ಕಪಕ್ಕ ರಾತ್ರಿ ವೇಳೆ ನಿಲುಗಡೆ ಆಗುವ ಕಾರುಗಳನ್ನ ತಪಾಸಣೆ ಮಾಡಲು ಪೊಲೀಸರು ಪ್ರಾರಂಭ ಮಾಡಲಾಗಿದೆ. ಆ ಮೂಲಕ ಡ್ರಂಕ್ ಅ್ಯಡ್ ಡ್ರೈವ್‌ ಪ್ರಕರಣ ತಗ್ಗಿಸಲು ಬೆಳಗಾವಿ ಪೊಲೀಸರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈ ರೀತಿಯಲ್ಲಿ ಪ್ರರಿಶೀಲನೆಯ ವೇಳೆ ಸುಮಾರು 24 ಪ್ರಕರಣಗಳನ್ನು ದಾಖಲಿಸಿಕೊಳ್ಳುವುದರ ಮೂಲಕ ಕುಡುಕರಿಗೆ ಸಿಂಹ ಸ್ವಪ್ನವಾಗಿದೆ ಬೆಳಗಾವಿಯ ಖಾಕಿಪಡೆ. ಈ ಕಾರ್ಯಾಚರಣೆಯಿಂದ ಮಧ್ಯ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !