November 5, 2026
Thursday, November 5, 2026
spot_img

ಉದ್ಯೋಗಿಗಳಿಗೆ ಬಂಪರ್‌ ಆಫರ್‌: ದೀಪಾವಳಿ ಹಬ್ಬಕ್ಕೆ ಐ ಫೋನ್‌ ಗಿಫ್ಟ್‌ ಕೊಟ್ಟ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿ ಹಬ್ಬಕ್ಕೆ ಉದ್ಯೋಗಿಗಳಿಗೆ ಉತ್ತಮ ಗಿಫ್ಟ್‌, ಬೋನಸ್‌ಗಳನ್ನು ಕಂಪನಿಗಳು ನೀಡುತ್ತವೆ. ಕಂಪನಿ ನೀಡುವ ಬೋನಸ್‌ ಹಾಗೂ ಗಿಫ್ಟ್‌ಗಳಿಗೆ ಉದ್ಯೋಗಿಗಳು ವರ್ಷವಿಡೀ ಎದುರು ನೋಡುತ್ತಾರೆ. ಕೆಲವು ಕಂಪನಿಗಳ ಉದ್ಯೋಗಿಗಳಿಗೆ ಸೋಂಪಾಪುಡಿ ಸಿಕ್ಕರೆ ಹಲವು ಉದ್ಯೋಗಿಗಳಿಗೆ ಐಷಾರಾಮಿ ಐ ಫೋನ್‌ ಉಡುಗೊರೆಯಾಗಿ ಸಿಕ್ಕಿದೆ.

ಹೌದು, ದೆಹಲಿ ಮೂಲಕದ ಕಂಪನಿಯೊಂದು ದೀಪಾವಳಿ ಹಬ್ಬಕ್ಕೆ ಐಫೋನ್‌ 16 ನೀಡಿ ಖುಷಿಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಉದ್ಯೋಗಿಗಳು ಕಚೇರಿಗೆ ಬರುವ ಮುನ್ನವೇ ಎಲ್ಲರ ಡೆಸ್ಕ್‌ ಮೇಲೆ ಐಫೋನ್‌ಗಳನ್ನು ಇಡಲಾಗಿದೆ.

https://www.instagram.com/reel/DfQBeaxyhYY/?utm_source=ig_embed&ig_rid=A7IZS7eGA1EIoQpIqEY-7Lh

ಎಂದಿನಂತೆ ಕಚೇರಿಗೆ ಬಂದ ಉದ್ಯೋಗಿಗಳಿಗೆ ತಮ್ಮ ಟೇಬಲ್‌ ಮೇಲಿದ್ದ ಐ ಫೋನ್‌ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಗಿಫ್ಟ್‌ ನಿರೀಕ್ಷೆ ಇರಲಿಲ್ಲ. ವರ್ಷಕ್ಕೊಮ್ಮೆ ಸಿಗುವ ಬೋನಸ್‌ ಹಾಗೂ ಗಿಫ್ಟ್‌ ನಮಗೆ ಅಚ್ಚುಮೆಚ್ಚು. ಇದು ಕಂಪನಿಯಲ್ಲಿ ಇನ್ನಷ್ಟು ವರ್ಷ ಕೆಲಸ ಮಾಡಲು ಹಾಗೂ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಉದ್ಯೋಗಿಗಳು ಹೇಳಿದ್ದಾರೆ.

ನಿಮ್ಮ ಕಂಪನಿಯಲ್ಲಿ ವೇಕೆನ್ಸಿ ಇದೆಯಾ? ಎಂದು ಹಲವರು ಪ್ರಶ್ನಿಸಿದ್ದಾರೆ. ನಮ್ಮ ಕಂಪನಿಯಲ್ಲಿ ಒಂದು ಬಾಕ್ಸ್‌ ಸಿಹಿ ಸಿಕ್ಕಿದೆ ಎಂದು ಕೆಲವರು ಹೇಳಿದ್ರೆ ನಮ್ಮ ಆಫೀಸ್‌ನಲ್ಲಿ ಅದನ್ನೂ ಕೊಟ್ಟಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ.

Must Read