March 5, 2026
Thursday, March 5, 2026
spot_img

FOOD | ತೂಕ ಇಳಿಸೋರಿಗೆ ಈ ಮಖಾನಾ ಚಾಟ್ ಮಾಡಿಕೊಡಿ: ಫುಲ್ ಖುಷಿಯಾಗ್ತಾರೆ ನೋಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಸ್ನ್ಯಾಕ್ಸ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಅದರಲ್ಲಿ ಮಖಾನಾ (Fox Nuts) ಅತ್ಯಂತ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವಾಗಿದೆ. ಕಡಿಮೆ ಕ್ಯಾಲೊರಿ, ಹೆಚ್ಚು ಪ್ರೋಟೀನ್ ಹಾಗೂ ಫೈಬರ್ ಇರುವುದರಿಂದ ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಸಹ ಉತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಮಖಾನಾವನ್ನು ಹುರಿದು ತಿನ್ನಲಾಗುತ್ತದೆ, ಆದರೆ ಅದನ್ನು ಚಾಟ್ ರೂಪದಲ್ಲಿ ತಯಾರಿಸಿದರೆ ಇನ್ನಷ್ಟು ರುಚಿಯಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಮಖಾನಾ – 1 ಕಪ್
ಈರುಳ್ಳಿ (ಸಣ್ಣದಾಗಿ ಕತ್ತರಿಸಿದ್ದು) – 2 ಟೇಬಲ್ ಸ್ಪೂನ್
ಟೊಮ್ಯಾಟೊ (ಸಣ್ಣದಾಗಿ ಕತ್ತರಿಸಿದ್ದು) – 2 ಟೇಬಲ್ ಸ್ಪೂನ್
ಸೌತೆಕಾಯಿ– 2 ಟೇಬಲ್ ಸ್ಪೂನ್
ಹಸಿಮೆಣಸು – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ ರಸ – 1 ಟೀ ಸ್ಪೂನ್
ಚಾಟ್ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಒಂದು ಪ್ಯಾನ್‌ನಲ್ಲಿ ಮಖಾನಾವನ್ನು ಸ್ವಲ್ಪ ಬೆಣ್ಣೆ ಅಥವಾ ತುಪ್ಪದಲ್ಲಿ ಕಡಿಮೆ ಉರಿಯಲ್ಲಿ ಹುರಿದು ಕ್ರಿಸ್ಪಿ ಮಾಡಿಕೊಳ್ಳಿ. ನಂತರ ಅದನ್ನು ಒಂದು ಬೌಲ್‌ಗೆ ಹಾಕಿ.

ಅದಕ್ಕೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಸೌತೆಕಾಯಿ ಹಾಗೂ ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಚಾಟ್ ಮಸಾಲಾ, ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಮೃದುವಾಗಿ ಕಲಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ಹೆಚ್ಚಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !