ಹೊಸದಿಗಂತ ವರದಿ, ಯಾದಗಿರಿ:
ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ ರೋಜಾದ ಮಲ್ಲಿಕಾರ್ಜುನ ಮುತ್ಯಾನನ್ನು ಗುರುವಾರ ಕೊನೆಗೂ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಕಳೆದೊಂದು ವಾರದ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅಪೇಕ್ಷಾರ್ಹ ರೀತಿಯಲ್ಲಿ ಸ್ಪರ್ಶಿಸಿದ್ದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಹರದಾಡಿ, ಎಲ್ಲೆಡೆ ಭಾರಿ ಸದ್ದು ಮಾಡಿತ್ತು. ಭಾರಿ ಪರ,ವಿರೋಧ ಚರ್ಚೆ ನಡೆಸು ಕೊನೆಗೆ ರಾಜ್ಯ ಮಕ್ಕಳ ಆಯೋಗ ಮತ್ತು ಮಹಿಳಾ ಆಯೋಗಗಳು ಸ್ವಯಂ ದೂರು ದಾಖಲು ಮಾಡಿಕೊಂಡಿದ್ದವು.
ಇಂದು ಮಧ್ಯಾಹ್ನ 3 ಗಂಟೆ ನಂತರ ಶಹಾಪುರ ಪೋಲಿಸರ ಮುಂದೆ ಹಾಜರಾದ ಮುತ್ಯಾನನ್ನು ತಾಲೂಕಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸಿ ಯಾದಗಿರಿ ಜಿಲ್ಲಾ ಕಾರಾಗ್ರಹಕ್ಕೆ ಕರೆ ತಂದಿರುವುದು ಖಚಿತ ಮೂಲಗಳು ದೃಢಪಡಿಸಿವೆ.



