April 26, 2026
Sunday, April 26, 2026
spot_img

LIFE | ಹೆಚ್ಚು ವಿಷ್ಯ ಸಿಗ್ತಿದೆ… ಆದರೆ ಮನಸ್ಸಿಗೆ ಕ್ಲಾರಿಟಿ ಯಾಕೆ ಸಿಗ್ತಿಲ್ಲ?

ಇಂದಿನ ಜಗತ್ತಿನಲ್ಲಿ ಮಾಹಿತಿ ಕೊರತೆ ಅನ್ನೋದೇ ಇಲ್ಲ. ಯಾವ ವಿಷಯ ಬೇಕಾದರೂ ಒಂದು ಕ್ಲಿಕ್‌ನಲ್ಲಿ ಸಿಗುತ್ತದೆ. ಆರೋಗ್ಯದಿಂದ ಹಿಡಿದು ಹಣಕಾಸು, ಸಂಬಂಧಗಳಿಂದ ಹಿಡಿದು career ಪ್ರತಿಯೊಂದು ವಿಷಯಕ್ಕೂ ನೂರಾರು ಸಲಹೆಗಳು, ಸಾವಿರಾರು ವಿಡಿಯೋಗಳು, ಲಕ್ಷಾಂತರ ಅಭಿಪ್ರಾಯಗಳು ನಮ್ಮ ಮುಂದೆ ಇವೆ. ಆದರೆ ಇಷ್ಟೆಲ್ಲಾ ಮಾಹಿತಿ ಇದ್ದರೂ, ನಮ್ಮ ಮನಸ್ಸಿಗೆ ಸ್ಪಷ್ಟತೆ ಮಾತ್ರ ಸಿಗುತ್ತಿಲ್ಲ.

ಕಾರಣ ಒಂದು ನಾವು ತಿಳಿದುಕೊಳ್ಳುವುದಕ್ಕಿಂತ ಹೆಚ್ಚು absorb ಮಾಡ್ತಿದ್ದೇವೆ. ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಹೋಗಿ, ಹತ್ತು ವಿಭಿನ್ನ ಅಭಿಪ್ರಾಯಗಳನ್ನು ಕೇಳುತ್ತೇವೆ. ಯಾರೋ ಒಂದು ದಾರಿ ಸರಿಯೆಂದರೆ, ಇನ್ನೊಬ್ಬರು ಅದಕ್ಕೆ ವಿರುದ್ಧವಾದ ಮಾತು ಹೇಳುತ್ತಾರೆ. ಕೊನೆಗೆ ಯಾವುದು ಸರಿ, ಯಾವುದು ತಪ್ಪು ಅನ್ನೋದಕ್ಕಿಂತ “ನಾನು ಏನು ಮಾಡಬೇಕು?” ಅನ್ನೋ ಕನ್ಫ್ಯೂಷನ್ ಜಾಸ್ತಿಯಾಗುತ್ತದೆ.

ಇದನ್ನೂ ಓದಿ:

ಹೆಚ್ಚು ಮಾಹಿತಿ ಸಿಕ್ಕಷ್ಟು ಯೋಚನೆ ಕೂಡ ಹೆಚ್ಚಾಗುತ್ತದೆ. ಪ್ರತಿಯೊಂದು ನಿರ್ಧಾರಕ್ಕೂ ನಾವು ಹೆಚ್ಚು ಅನಾಲಿಸಿಸ್ ಮಾಡುತ್ತೇವೆ. ಸರಳ ವಿಷಯಗಳನ್ನೂ ಕಷ್ಟವಾಗಿಸಿಕೊಳ್ಳುತ್ತೇವೆ. ಹೀಗೆ ಮನಸ್ಸು ಮಾಹಿತಿ ತುಂಬಿದ ಕೊಠಡಿಯಂತೆ ಆಗುತ್ತದೆ. ಎಲ್ಲವೂ ಇದೆ, ಆದರೆ ಬೇಕಾದದ್ದು ಎಲ್ಲಿದೆ ಅನ್ನೋ ಕ್ಲಾರಿಟಿ ಇಲ್ಲ.

ಕೆಲವೊಮ್ಮೆ ಕ್ಲಾರಿಟಿ ಬರೋದು ಹೆಚ್ಚು ತಿಳಿದುಕೊಂಡಾಗ ಅಲ್ಲ… ಸ್ವಲ್ಪ ನಿಂತಾಗ. ಹೊರಗಿನ ಧ್ವನಿಗಳನ್ನ ಕಡಿಮೆ ಮಾಡಿ, ನಮ್ಮೊಳಗಿನ ಧ್ವನಿಯನ್ನು ಕೇಳಿದಾಗ. ಎಲ್ಲರ opinion ಕೇಳೋದಕ್ಕಿಂತ, ನಮ್ಮ ಅಗತ್ಯ ಏನು ಅನ್ನೋದನ್ನು ಅರ್ಥಮಾಡಿಕೊಂಡಾಗ.

ಮಾಹಿತಿ ನಮಗೆ ದಾರಿ ತೋರಿಸಬಹುದು. ಆದರೆ ಕ್ಲಾರಿಟಿ ಕೊಡೋದು ನಮ್ಮ ಆಲೋಚನೆ. ಅದಕ್ಕೆ ಸ್ವಲ್ಪ ಮೌನ, ಸ್ವಲ್ಪ ಸಮಯ, ಸ್ವಲ್ಪ introspection ಬೇಕು. ಯಾಕೆಂದರೆ ಎಲ್ಲವನ್ನೂ ತಿಳಿದಿರುವುದು ಜ್ಞಾನವಾಗಬಹುದು… ಆದರೆ ಯಾವುದು ಮುಖ್ಯ ಅನ್ನೋದನ್ನು ಅರಿಯುವುದೇ ಕ್ಲಾರಿಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !