June 20, 2026
Saturday, June 20, 2026
spot_img

ದಾಖಲೆಯ ಬಜೆಟ್‌ ಮಂಡನೆ ಮಾಡೋಕೆ ರೆಡಿಯಾದ ಸಿಎಂ ಸಿದ್ದು, ಆಯವ್ಯಯದ ಗಾತ್ರ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಬೆಳಗ್ಗೆ 10:15ರಿಂದ ವಿಧಾನಸೌಧದಲ್ಲಿ ಬಜೆಟ್‌ ಆರಂಭವಾಗಲಿದೆ.

ಈ ಬಾರಿ ಬಜೆಟ್‌ನ ಗಾತ್ರ ಸುಮಾರು 4:50 ಲಕ್ಷ ಕೋಟಿ ರೂ. ಎನ್ನಲಾಗಿದೆ. ಇದು ಹಣಕಾಸು ಇಲಾಖೆ ಅಂದಾಜು ಮೊತ್ತವಾಗಿದೆ. ಬಜೆಟ್‌ ಮಂಡನೆ ನಂತರವೇ ಸರಿಯಾದ ಮೊತ್ತ ತಿಳಿಯಲಿದೆ. ಅದೇ ಸಮಯದಲ್ಲಿ ಸಾಲದ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಹಣಕಾಸು ನಿರ್ವಹಣೆ ಹೇಗೆ ಮಾಡುತ್ತದೆ ಎಂದು ಜನ ಕಾಯುತ್ತಿದ್ದಾರೆ.

ರಾಜ್ಯದ ಎಲ್ಲ ವಲಯಗಳು ಬಜೆಟ್‌ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದು, ಅಭಿವೃದ್ಧಿಗಾಗಿ ಕಾಯುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಎಂದು ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !