Saturday, August 30, 2025

ಶ್ರವಣಬೆಳಗೊಳದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

ಹೊಸದಿಗಂತ ವರದಿ ಚನ್ನರಾಯಪಟ್ಟಣ :

ತಾಲ್ಲೂಕಿನ ಶ್ರವಣಬೆಳಗೊಳ ಪಟ್ಟಣದ ಹೊರವಲಯದ ಜಿನ್ನಾಥಪುರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಯಾರೋ ಬೇರೆಡೆ ಕೊಲೆ ಮಾಡಿ ಮೃತ ದೇಹವನ್ನು ಬೆಂಕಿ ಹಚ್ಚಿ ಸುಡಲು ಯತ್ನಿಸಿ, ಶವವು ಸಂಪೂರ್ಣ ಸುಡಡಿದ್ದಾಗ ಉಳಿದ ಅಸ್ತಿಪಂಜರವನ್ನು ಗೊಬ್ಬರದ ಚೀಲದಲ್ಲಿ ಕಟ್ಟಿ ಶ್ರವಣಬೆಳಗೊಳದ ಸ್ಮಶಾನದಲ್ಲಿ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ.

ದನ ಮೇಯಿಸಲು ಬಂದ ವ್ಯಕ್ತಿ ಚೀಲದಲ್ಲಿ ತುಂಬಿದ್ದ ಸುಟ್ಟು ಕರಕಲಾದ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್, ಪಿಎಸ್ಐ ನವೀನ್ ಹಾಗೂ ಸೋಕೊ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ