ಪ್ರತಿದಿನವೂ ಬಾದಾಮಿ ಹಾಲನ್ನು ಕುಡಿಯುತ್ತಿದ್ದೀರಾ? ಹಾಗಿದ್ರೆ ಸಾಕಷ್ಟು ಆರೋಗ್ಯಕರ ಲಾಭವನ್ನು ನೀವು ಅನುಭವಿಸುತ್ತಿದ್ದೀರಿ. ಯಾವ ಲಾಭ ನೋಡಿ..
ಫೈಬರ್ ಯುಕ್ತ ಬಾದಾಮಿ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ತಡೆಯುತ್ತದೆ.
ಎಲುಬುಗಳ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಬಾದಾಮಿ ಹಾಲಿನಲ್ಲಿ ಹೇರಳವಾಗಿದೆ. ಆದ್ದರಿಂದ ಇದನ್ನು ಕುಡಿಯುವುದರಿಂದ ಎಲುಬುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಬಾದಾಮಿ ಹಾಲು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆರೋಗ್ಯಕರ ಕೊಬ್ಬನ್ನು ಹೊಂದಿರುವ ಬಾದಾಮಿ ಹಾಲು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಇದರ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳು ಬಾದಾಮಿ ಹಾಲನ್ನು ಧೈರ್ಯವಾಗಿ ಕುಡಿಯಬಹುದು.
ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬಾದಾಮಿ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಒಂದು ಕಪ್ ಬಾದಾಮಿ ಹಾಲಿನಲ್ಲಿ ಕೇವಲ 39 ಕ್ಯಾಲೋರಿಗಳಿವೆ. ಇದು ಹಸಿವು ಕಡಿಮೆ ಮಾಡಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
HEALTH |ನಿತ್ಯವೂ ಬಾದಾಮಿ ಹಾಲನ್ನು ಕುಡಿಯುತ್ತಿದ್ದೀರಾ? ತುಂಬಾ ಲಾಭ ಇದೆ ಬಿಡಿ..
