March 7, 2026
Saturday, March 7, 2026
spot_img

ಐಟಿಎಫ್ ಮಹಿಳಾ ಓಪನ್ ಟೆನಿಸ್: ಡಬಲ್ಸ್ ನಲ್ಲಿ ಮಿಂಚಿದ ಭಾರತೀಯ ಮಹಿಳಾಮಣಿಗಳು

ಹೊಸದಿಗಂತ ವರದಿ ​ಕಲಬುರಗಿ:

ಕಠಿಣ ಕ್ಷಣದಲ್ಲಿ ಸಮಾಧಾನದಿಂದ ಆಡಿದ ಭಾರತದ ಅನುಭವಿ ಜೋಡಿಗಳು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಅದ್ಭುತವಾದ ಆಟ ಪ್ರದರ್ಶನ ಮಾಡುವ ಮೂಲಕ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ನ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿವೆ.

ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಅಂಗಣದಲ್ಲಿ ನಡೆದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕೋರ್ಟ್ 2ರಲ್ಲಿ ನಡೆದ ವುಮೆನ್ಸ್ ಡಬಲ್ ಪಂದ್ಯದಲ್ಲಿ ಭಾರತದ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ ಜೋಡಿ ಮಹತ್ವದ ಕ್ಷಣಗಳಲ್ಲಿ ಧೈರ್ಯ ಕಳೆದುಕೊಳ್ಳದೆ ಟೈಬ್ರೇಕ್‌ನಲ್ಲಿ ಒಂದನೇ ಸೆಟ್ ತಮ್ಮದಾಗಿಸಿಕೊಂಡರು. ಅನಂತರ 2ನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದ ಭಾರತದ ಸೋನಲ್ ಪಾಟೀಲ್ ಮತ್ತು ಬೇಲಾ ತಮ್ಹಂಕರ್ ಜೋಡಿಯನ್ನು ಅಂತಿಮವಾಗಿ 7–6, 6–2 ಅಂಕಗಳಿಂದ ಸೋಲಿಸಿ ಗಮನಾರ್ಹ ಜಯ ಸಾಧಿಸಿದರು.

ಇದನ್ನೂ ಓದಿ:

ಮತ್ತೊಂದು ಡಬಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಆಕಾಂಕ್ಷಾ ದಿಲೀಪ್‌ ನಿಟ್ಟೂರ ಮತ್ತು ಸೋಹಾ ಸಾದಿಕ್‌ ಜೋಡಿ 6-7 (7), 6-0, 10-5 ಸೆಟ್‌ಗಳಿಂದ ಜಪಾನ್‌ನ ಮಿಚಿಕಾ ಒಜೆಕಿ ಹಾಗೂ ಶ್ರಾವ್ಯ ಶಿವಾನಿ ಚಿಲಕಲಪುಡಿ ಜೋಡಿಗೆ ಆಘಾತ ನೀಡಿ ಫೈನಲ್‌ ತಲುಪಿತು. ಇದೀಗ ನಾಳೆ ನಡೆಯಲಿರುವ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿಗಳು ಗದ್ದುಗೆಗಾಗಿ ಗುದ್ದಾಟ ನಡೆಸಲಿವೆ.

ಇಂದಿನ ಸಿಂಗಲ್ಸ್, ಡಬಲ್ಸ್ ಫಲಿತಾಂಶ:

ವೈಷ್ಣವಿ ಅಡ್ಕರ್ ಎಲಿನಾ ನೆಪಲಿಗೆ 6-1, 6-3ರಿಂದ ಸೋಲು

ಅಂಕಿತಾ ರೈನಾ,ಇವಗೇನಿಯಾ ಬರಡಿನಾಗೆ 6-0, 6-2ರಿಂದ ಸೋಲು

ಟಾಸಪರನ್ ನಾಕ್ಲೋ ಅಂಚಿಸಾ ಚಾಂಟಾಗೆ 6-4, 6-1ರಿಂದ ಸೋಲು

ಜಾಸ್ಮಿನ್ ಗಿಂಬ್ರೇರ್ ಮಾಯನ್ ಲಾರೋನ್,ಗೆ 6-2, 6-2ರಿಂದ ಸೋಲು

2ನೇ ಸೀಡ್ ವೈಷ್ಣವಿ ಅಡ್ಕರ್, ಅಂಕಿತಾ ರೈನಾ ಜೋಡಿ ಬೆಲಾ ತಮಂಕರ ಜೋಡಿಯನ್ನು 7-6(5), 6-2 ಅಂತರದಲ್ಲಿ ಸೋಲಿಸಿತು.

ಆಕಾಂಕ್ಷಾ ನಿಟ್ಟೂರೆ, ಸೋಹಾ ಸಾಧಿಕ ಜೋಡಿ ಎಸ್ ಎಸ್ ಚಿಲಕಲಾಪುಡಿ ಹಾಗೂ ಮಿಚಿಕಾ ಓಜೇಕಿ ಜೋಡಿಯನ್ನು 6-7(7), 6-0, [10-5] ಅಂಕಗಳಿಂದ ಸೋಲಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !