ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿ ಸಂಗೀತಾ ಸೊರ್ನಲಿಂಗಂ ಅವರೊಂದಿಗಿನ ವಿಚ್ಛೇದನ ವದಂತಿ ನಡುವೆ, ನಟ ವಿಜಯ್ ಇಂದು ಟಿವಿಕೆ ರಾಜಕೀಯ ಪಕ್ಷದ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾರ್ಟಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ಆಗಮಿಸಿದ್ದು, ಡಿವೋರ್ಸ್ ಅರ್ಜಿ ಕುರಿತು ಮೌನ ಮುರಿದಿದ್ದಾರೆ.
ಅಭಿಮಾನಿಗಳು ಯಾವುದೇ ವಿಚಾರಕ್ಕೂ ಸಂಕಟ ಪಡಬೇಕಿಲ್ಲ. ದಯವಿಟ್ಟು ನನ್ನನ್ನು ಸುತ್ತುವರೆದಿರುವ ಇತ್ತೀಚಿನ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ. ಆ ಸಮಸ್ಯೆಗಳು ನಿಮ್ಮ ಸಮಯಕ್ಕೆ ಯೋಗ್ಯವಾಗಿಲ್ಲ. ನಾನೇ ಅವುಗಳನ್ನು ನೋಡಿಕೊಳ್ಳುತ್ತೇನೆ. ನನ್ನ ಸಮಸ್ಯೆಗಳಿಂದಾಗಿ ನೀವು ದುಃಖಿತರಾಗಿದ್ದೀರಿ ಹಾಗೂ ಒತ್ತಡಕ್ಕೊಳಗಾಗಿದ್ದೀರಿ ಎಂದು ನೋಡುವುದು ನನಗೆ ಹೆಚ್ಚು ನೋವುಂಟು ಮಾಡುತ್ತದೆ. ದಯವಿಟ್ಟು ನನಗಾಗಿ ಆ ಹೊರೆಯನ್ನು ಹೊರಬೇಡಿ. ಬದಲಾಗಿ, ಜನರ ಕಲ್ಯಾಣದತ್ತ ಗಮನ ಹರಿಸೋಣ ಎಂದು ಅವರು ಹೇಳಿದರು.
ವೈಯುಕ್ತಿಕ ವಿಚಾರಗಳಿಗೆ ಕಿವಿಗೊಡಬೇಡಿ, ವದಂತಿಗಳಿಗೆ ಹೆದರಬೇಡಿ ಎಂದಿದ್ದಾರೆ. ನಾವು ಜನರ ಕಷ್ಟಗಳನ್ನು ಕೇಳಲು ಅದಕ್ಕೆ ಪರಿಹಾರ ಸೂಚಿಸಲು ಬಂದಿದ್ದೇವೆ. ನಮ್ಮ ಉದ್ದೇಶದ ಜೊತೆ ಮುಂದೆ ಸಾಗೋಣ ಎಂದು ವಿಜಯ್ ಹೇಳಿದ್ದಾರೆ.
ಇತ್ತ ಸಂಗೀತಾ ಸ್ವರ್ಣಲಿಂಗಮ್ ಪಿಟೀಶನ್ ಸಲ್ಲಿಸಿದ್ದು, ವಿಜಯ್ ಜೊಸೆಫ್ ಜೊತೆಗಿನ ವಿವಾಹ ವಿಚ್ಚೇದನ ಪ್ರಕ್ರಿಯ ಪೂರ್ಣಗೊಳ್ಳುವವರೆಗೆ ಮನೆಯಲ್ಲಿ ಇರಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.



