September 30, 2026
Wednesday, September 30, 2026
spot_img

ಸ್ವಂತ ತಾತನಿಂದಲೇ ಮೊಮ್ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ: ಬಾಯಿಗೆ ಬಟ್ಟೆ ತುರುಕಿ ಹಿಂಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ. ಕೆಂಭಾವಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಯಿಯೊಬ್ಬಳು ತಮ್ಮ ಮಗಳನ್ನು ತನ್ನ ಪೋಷಕರ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಅಜ್ಜ ಅಜ್ಜಿಯ ಮನೆಯಲ್ಲಿ ಮೊಮ್ಮಗಳು ಸೇಫ್‌ ಆಗಿ ಇರುತ್ತಾಳೆ ಎಂದು ತಾಯಿ ನಂಬಿದ್ದಳು. ಆದರೆ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ. ಈ ವೇಳೆ ತಡೆಯಲು ಬಂದ ಪತ್ನಿಗೆ ಚಾಕಿ ತೋರಿಸಿ ಹೆದರಿಸಿದ್ದಾರೆ.

ಅಜ್ಜನ ಮೈಮೇಲೆ ಬಂದಿದ್ದನ್ನು ನೋಡಿ ಹೆದರಿದ ಮೊಮ್ಮಗಳು ಕೂಗಾಡಿದ್ದಾಳೆ. ಅತ್ಯಾಚಾರಕ್ಕೆ ಸಹಕಾರ ನೀಡದ ಹಿನ್ನೆಲೆ ಆಕೆಯ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕೂಗಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ 75 ವರ್ಷದ ಶರಣಪ್ಪ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಪೋಕ್ಸೋ ಕೇಸ್ ಹಾಗೂ ವಿವಿಧ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಿರುವ ಕೆಂಭಾವಿ ಪೊಲೀಸರು ತನಿಖೆ ನಡೆಸಿದ್ದಾರೆ.

Must Read