October 7, 2026
Wednesday, October 7, 2026
spot_img

ಶುಭರಾತ್ರಿ: ನಾಳೆ ಸಂಡೇ ಅಂತ ಫೋನ್ ನೋಡಿ ಕಣ್ಣು ಕೆಡಿಸಿಕೊಳ್ಳಬೇಡಿ.. ಹೊದಿಕೆ ಹೊದ್ದು ಆರಾಮಾಗಿ ಮಲಗಿ!

ನಾಳೆ ಭಾನುವಾರ! ವಾರವಿಡೀ ಕೆಲಸದ ಒತ್ತಡದಲ್ಲಿ ಬೆಂದ ನಿಮಗಾಗಿ ಒಂದು ಸಣ್ಣ ಕಿವಿಮಾತು. ನಾಳೆ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ಕೂರಬೇಡಿ. ಆ ಇನ್‌ಸ್ಟಾಗ್ರಾಮ್ ರೀಲ್ಸ್, ವಾಟ್ಸಾಪ್ ಮೆಸೇಜ್‌ಗಳು ಎಲ್ಲೂ ಓಡಿ ಹೋಗಲ್ಲ. ಫೋನನ್ನು ದೂರವಿಟ್ಟು, ಕಣ್ಣುಗಳಿಗೆ ವಿಶ್ರಾಂತಿ ನೀಡಿ.

ಡಿಜಿಟಲ್ ಜಗತ್ತಿನಿಂದ ಒಂದು ದಿನ ವಿರಾಮ ಪಡೆಯಿರಿ. ನೈಸರ್ಗಿಕವಾಗಿ ಎಚ್ಚರವಾಗುವವರೆಗೆ ಮಲಗಿರಿ. ನಿಮ್ಮ ದೇಹ ಮತ್ತು ಮನಸ್ಸಿಗೆ ಬೇಕಾದ ಅಸಲಿ ಚೈತನ್ಯ ಸಿಗುವುದು ಗಾಢ ನಿದ್ದೆಯಲ್ಲಿಯೇ ಹೊರತು ಮೊಬೈಲ್ ಸ್ಕ್ರೀನ್ ನೋಡುವುದರಲ್ಲಲ್ಲ.

ಅಲಾರಂ ಇಟ್ಟಿದ್ದೀರಾ? ಮೊದಲು ಅದನ್ನು ಡಿಲೀಟ್ ಮಾಡಿ! ನೀವು ಕೂಡ ಕುಂಭಕರ್ಣನ ಅವತಾರ ತಾಳಿ. ಆರಾಮವಾಗಿ ಮಲಗಿ. ಶುಭರಾತ್ರಿ!!

Must Read