October 7, 2026
Wednesday, October 7, 2026
spot_img

ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿ ಸಿಕ್ಕಿಬಿದ್ದ ಮಹಿಳೆ: ʼಶುದ್ಧೀಕರಣʼಕ್ಕಾಗಿ ಗ್ಯಾಂಗ್‌ ರೇ*ಪ್‌!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಂಡನನ್ನು ಬಿಟ್ಟು ತನ್ನ ಪ್ರಿಯಕರನ ಜೊತೆ ಜೀವನ ನಡೆಸಲು ಓಡಿಹೋಗಿ ಸಿಕ್ಕುಬಿದ್ದ ಮಹಿಳೆಗೆ ʼಶುದ್ಧೀಕರಣʼದ ಹೆಸರಿನಲ್ಲಿ ಸಾಮೂಹಿಕ ಅತ್ಯಾಚಾರ, ದೈಹಿಕ ಹಿಂಸೆ ನೀಡಿರುವ ಘಟನೆ ಗುಜರಾತ್‌ನ ಸುರೇಂದ್ರನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿಯನ್ನೂ ಸೇರಿ ಒಂಬತ್ತು ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ.

ರೂಮಿನಲ್ಲಿ ಲಾಕ್‌ ಮಾಡಿದ್ದ ಪತಿ

ಪತಿಯನ್ನು ಬಿಟ್ಟು ಮಹಿಳೆಯೊಬ್ಬರು ಪರಪುರುಷನ ಪ್ರೀತಿಯಲ್ಲಿ ಬಿದ್ದಿದ್ದಳು. ಇದರ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಕೆಯ ಪತಿ ಹಾಗೂ ಫ್ಯಾಮಿಲಿ ಈ ಸಂಬಂಧಕ್ಕೆ ಅಡ್ಡಿಪಡಿಸಿ ಮಹಿಳೆಯನ್ನು ರೂಮಿನಲ್ಲಿ ಕೂಡಿಹಾಕಿದ್ದಾರೆ. ಆಕೆ ಎಷ್ಟು ಬೇಡಿಕೊಂಡರೂ ರೂಮಿನಿಂದ ಹೊರಗೆ ಬರಲು ಬಿಟ್ಟಿಲ್ಲ. ಆದರೆ ಆಕೆ ಸತತ ಹಲವು ದಿನಗಳ ಪ್ರಯತ್ನದ ನಂತರ ಮನೆಯಿಂದ ಓಡಿಹೋಗಿ ಪರಪುರುಷನ ಜೊತೆ ಜೀವನ ನಡೆಸಲು ಆರಂಭಿಸಿದ್ದಾಳೆ. ನಂತರ ಪತಿ, ಆಕೆ ಹಾಗೂ ಪರಪುರುಷನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದು ಆಕೆಯನ್ನು ಮನೆಗೆ ವಾಪಾಸ್‌ ಕರೆದುಕೊಂಡು ಬಂದಿದ್ದಾರೆ.

ಶುದ್ಧೀಕರಣದ ಹೆಸರಿನಲ್ಲಿ ದೈಹಿಕ ಹಿಂಸೆ, ಅತ್ಯಾಚಾರ

ಬೇರೆ ಗಂಡಸಿನ ಜೊತೆ ಇದ್ದು ಬಂದು ಮಹಾಪಾಪ ಮಾಡಿದ್ದಾಳೆ ಎಂದು ಮಹಿಳೆಯನ್ನು ಸುರೇಂದ್ರನಗರದಲ್ಲಿನ ಮರವೊಂದಕ್ಕೆ ಕಟ್ಟಿಹಾಕಿದ್ದಾರೆ. ಕೋಲಿನಿಂದ ಹೊಡೆದು, ಕಾಲಿನಿಂದ ಒದ್ದಿದ್ದಾರೆ. ನಂತರ ಗ್ಯಾಂಗ್‌ ರೇಪ್‌ ಮಾಡಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಗಂಡನನ್ನು ಬಿಟ್ಟು ಓಡಿಹೋದ ಮಹಿಳೆಯ ಶುದ್ಧೀಕರಣ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪೊಲೀಸರು ಒಂಬತ್ತು ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ.

ಪ್ರಕರಣ ಬೇಧಿಸಿದ ಪೊಲೀಸರು

ಸುರೇಂದ್ರನಗರದಲ್ಲಿ ಹೀಗೆಲ್ಲಾ ಆಗುತ್ತಿದೆ ಎಂದು ಯಾರೋ ನಮಗೆ ವಿಡಿಯೋ ಕಳಿಸಿದ್ದರು. ಆಗ ತನಿಖೆ ಮಾಡಿದೆವು. ಮಹಿಳೆ ಇನ್ನೊಬ್ಬ ಗಂಡಸಿನ ಜೊತೆ ಹೋಗಿದ್ದಕ್ಕೆ ಶುದ್ಧೀಕರಣ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಹಲ್ಲೆ, ಅತ್ಯಾಚಾರ ಹಾಗೂ ದೈಹಿಕ ಹಿಂಸೆಯಲ್ಲಿ ಇಬ್ಬರು ಮಹಿಳೆಯರು ಕೂಡ ಭಾಗಿಯಾಗಿದ್ದಾರೆ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ!

Must Read