March 9, 2026
Monday, March 9, 2026
spot_img

ಭಾರತದ ಗೆಲುವನ್ನು ಈ ಇಬ್ಬರು ವ್ಯಕ್ತಿಗಳಿಗೆ ಅರ್ಪಿಸಿದ ಕೋಚ್‌ ಗಂಭೀರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಿ20 ವಿಶ್ವಕಪ್‌ನ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಒಂದೇ ಮ್ಯಾಚ್‌ ಮೂಲಕ ಮೂರು ದಾಖಲೆ ಸೃಷ್ಟಿಸಿದೆ. ಈ ಮೂಲಕ ಕೋಚ್‌ ಗೌತಮ್‌ ಗಂಭೀರ್‌ ಹೆಮ್ಮೆಪಡುವಂತಾಗಿದೆ.

ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗಂಭೀರ್‌ ಪಡೆ ಸೋಲು ಅನುಭವಿಸಿತ್ತು. ಇದೀಗ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಎಲ್ಲರಿಗೂ ಹೆಮ್ಮೆಯಾಗುವಂತೆ ಮಾಡಿದೆ.

ಈ ಬಗ್ಗೆ ಗೌತಮ್‌ ಗಂಭೀರ್‌ ಮಾತನಾಡಿದ್ದು, ನನ್ನ ತಂಡದ ಈ ಗೆಲುವನ್ನು ಇಬ್ಬರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಅವರಿಗೆ ಈ ಗೆಲುವು ಅರ್ಪಣೆ. ನಮ್ಮ ತಂಡಕ್ಕೆ ಒಂದು ಉತ್ತಮ ಸ್ಥಾನ ನೀಡಿದ್ದಾರೆ. ನನ್ನ ಕಷ್ಟದಲ್ಲಿ ಜೊತೆಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಆಗುವ ಚರ್ಚೆಗಳಿಗೆ ನಾನು ಜವಾಬ್ದಾರ ಅಲ್ಲ.ಡ್ರೆಸ್ಸಿಂಗ್‌ ರೂಮ್‌ನಲ್ಲಿರುವ ನಮ್ಮ ಟೀಂ ಮೆಂಬರ್ಸ್‌ಗೆ ಮಾತ್ರ ನಾನು ಜವಾಬ್ದಾರಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !