ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಟ್ಜಿಪಿಯಲ್ಲಿ ಯಾವ ಮಾತ್ರೆ, ಯಾವ ಇಂಜೆಕ್ಷನ್ನಿಂದ ಸಾಯಬಹುದು ಎಂದು ಹುಡುಕಿದ್ದ ಯುವತಿಯರು ಬಾತ್ರೂಮ್ನಲ್ಲಿ ಹೆಣವಾಗಿ ಸಿಕ್ಕಿದ್ದಾರೆ!
ಹೌದು, ಸೂರತ್ನಲ್ಲಿ ವಿದ್ಯಾರ್ಥಿನಿಯರಿಬ್ಬರು ಚಾಟ್ಜಿಪಿಯಲ್ಲಿ ಸೂಸೈಡ್ ಮಾಡಿಕೊಳ್ಳೋದು ಹೇಗೆ ಎಂದು ಹುಡುಕಿ, ಇಂಜೆಕ್ಷನ್ ತೆಗೆದುಕೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಕೇಟ್ ಮಿಲ್ಲರ್ ಎನ್ನುವ ಯುವತಿ ಎಲಾನ್ ಮಸ್ಕ್ರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ ಅಯ್ಯೋ ಎಂದಷ್ಟೇ ರಿಪ್ಲೇ ಮಾಡಿದ್ದಾರೆ. ಕೇಟ್ ಮಿಲ್ಲರ್ ಟ್ವೀಟ್ನಲ್ಲಿ ಭಾರತದ ಇಬ್ಬರು ಯುವತಿಯರು ಚಾಟ್ ಜಿಪಿಟಿ ಬಳಕೆ ಮಾಡಿ ಸೂಸೈಡ್ ಮಾಡಿಕೊಂಡಿದ್ದಾರೆ. ಯಾರೇ ಆಗಲಿ ನಿಮ್ಮ ಪ್ರೀತಿಪಾತ್ರರಿಗೆ ಚಾಟ್ಜಿಪಿಟಿ ಬಳಸದಂತೆ ಮನವಿ ಮಾಡಿ ಎಂದಿದ್ದಾರೆ. ಇದಕ್ಕೆ ಎಲಾನ್ ಮಸ್ಕ್ ಬರೀ ಅಯ್ಯೋ ಎಂದಷ್ಟೇ ರಿಪ್ಲೇ ಮಾಡಿದ್ದಾರೆ.
ಸೂರತ್ನ ಸ್ವಾಮಿನಾರಾಯಣ ದೇವಾಲಯದ ಸ್ನಾನಗೃಹದೊಳಗೆ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಶವಗಳು ಪತ್ತೆಯಾಗಿತ್ತು. ವಿಷಕಾರಿ ಔಷಧಗಳ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿತ್ತು.
ದೇವಾಲಯ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹುಡುಗಿಯರು ಸ್ನಾನಗೃಹದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಸ್ನಾನಗೃಹವು ಒಳಗಿನಿಂದ ಲಾಕ್ ಆಗಿತ್ತು. ಅದನ್ನು ಒಡೆದು ಒಳನುಗ್ಗಿದಾಗ, ಹುಡುಗಿಯರು ಮೃತಪಟ್ಟಿರುವುದು ಕಂಡುಬಂದಿತ್ತು. ಅವರ ದೇಹದ ಬಳಿ ಬಿದ್ದಿದ್ದ ಒಂದು ಸಿರಿಂಜ್ ಮತ್ತು ಮೂರು ಬಾಟಲಿ ವಿಷಕಾರಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.



