October 9, 2026
Friday, October 9, 2026
spot_img

ಅಕ್ಟೋಬರ್ 3-4 ರಂದು ಬೆಳಗಾವಿಯಲ್ಲಿ ನಾಲ್ಕನೇ ವರ್ಷದ ʼಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್ʼ

ಹೊಸದಿಗಂತ ವರದಿ ಬೆಳಗಾವಿ:

ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕನೇ ಬಾರಿಗೆ ‘ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್’ ಆಯೋಜಿಸಲಾಗುತ್ತಿದ್ದು, ಅಕ್ಟೋಬರ್ 3 ಮತ್ತು 4ರಂದು ನಗರದ ಮರಾಠಾ ಮಂದಿರದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶನಿವಾರ ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಚೆಸ್ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದು ಹಾಗೂ ಪ್ರತಿಭಾವಂತ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಈ ಪಂದ್ಯಾವಳಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಚೆಸ್ ಕ್ರೀಡೆಯ ಬಗ್ಗೆ ಯುವಜನರಲ್ಲಿ ಆಸಕ್ತಿ ಹೆಚ್ಚಿಸುವುದು ಹಾಗೂ ಸ್ಥಳೀಯ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರೊಂದಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಇದನ್ನೂ ಓದಿ:

ಸತೀಶ್ ಅಣ್ಣಾ ಜಾರಕಿಹೊಳಿ ಚೆಸ್ ಟೂರ್ನಾಮೆಂಟ್ ಅನ್ನು ಕಳೆದ ಮೂರು ಬಾರಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಬಾರಿಯೂ ಅದೇ ಉತ್ಸಾಹದಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ವಿಜೇತ ಕ್ರೀಡಾಪಟುಗಳಿಗೆ ಒಟ್ಟು 6.50 ಲಕ್ಷ ಮೌಲ್ಯದ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಇಮ್ರಾನ್ ತಪಕೀರ್ ಎಸ್ಎಸ್ಸಿ ಉಪಾಧ್ಯಕ್ಷ ವಿಕಿ ಸಿಂಗ್, ಮತ್ತೊಬ್ಬ ಉಪಾಧ್ಯಕ್ಷ ಅಕ್ಬರ್ ಸಡೇಕರ್, ಜಾವೀದ್ ಖಾನಾಪುರಿ, ಬೆಳಗಾವಿ ಭಾಗದ ನೃತ್ಯ ಹಾಗೂ ಚೆಸ್ ಪೋಷಕ ಪ್ರಶಾಂತ್ ಅನ್ವೇಕರ್, ಅಲ್ಲಾಭಕ್ಷ ಇನಾಮದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Must Read