August 28, 2026
Friday, August 28, 2026
spot_img

ಕಾರವಾರದಲ್ಲಿ ಭೀಕರ ಅಪಘಾತ: ಕಾರಿನ ಮೇಲೆ ಕಂಟೇನರ್‌ ಪಲ್ಟಿಯಾಗಿ ಬಾಲಕ ಸಾ*ವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಅರಗಾ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದ್ದು, ಕಾರಿನ ಮೇಲೆ ಕಂಟೇನರ್‌ ಪಲ್ಟಿಯಾಗಿ ಪುಟ್ಟ ಬಾಲಕನೊಬ್ಬ ಮೃತಪಟ್ಟು, ದಂಪತಿ ಹಾಗೂ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಂಟೇನರ್ ಚಾಲಕ ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ.

ಕುಡಿದ ಮತ್ತಿನಲ್ಲಿ ಕಂಟೇನರ್ ಚಾಲಕ ಎಲ್ಲರ ಜೊತೆ ಗಲಾಟೆ ಮಾಡಿದ್ದಾನೆ. ರಸ್ತೆ ಮಧ್ಯೆ ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದ್ದು, ನಂತರ ಸಿಟ್ಟಿನಿಂದ ಕಂಟೇನರ್ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಮಹಾರಾಷ್ಟ್ರ ಪಾಸಿಂಗ್ ಕಾರಿನ ಮೇಲೆ ಕಂಟೇನರ್ ಬಿದ್ದು ಕಾರಿನಲ್ಲಿದ್ದ 8 ವರ್ಷದ ಮಗು ಮೃತಪಟ್ಟಿದೆ. ಸದ್ಯ ಕಂಟೇನರ್ ಚಾಲಕನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !