June 27, 2026
Saturday, June 27, 2026
spot_img

ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ, ಒಪಿಡಿ ಬಂದ್‌, ಹೆಲ್ತ್‌ ಎಮರ್ಜೆನ್ಸಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನಾಳೆಯಿಂದ ಸಮಸ್ಯೆ ಆರಂಭವಾಗಲಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ಮುಷ್ಕರ ಆರಂಭಿಸಲಿದ್ದು, ರಾಜ್ಯದಲ್ಲಿ ಹೆಲ್ತ್‌ ಎಮರ್ಜೆನ್ಸಿ ಥರದ ಸಂದರ್ಭ ಎದುರಾಗುವ ಲಕ್ಷಣಗಳಿವೆ.

ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ನಾಳೆಯಿಂದಲೇ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್‌ ಆಗುವ ಸಾಧ್ಯತೆ ಇದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಹೊಡೆತವಾಗಲಿದೆ. ವಾತಾವರಣದಲ್ಲಿ ಬದಲಾವಣೆಯ ಕಾರಣ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಆದರೆ ಸರ್ಕಾರಿ ಆಸ್ಪತ್ರೆಯ ಒಪಿಡಿ ಬಂದ್‌ ಆಗಲಿದೆ.

ಯಾಕೆ ಮುಷ್ಕರ?
ವೈದ್ಯಾಧಿಕಾರಿಗಳ ಸಂಘ ಹಲವು ವರ್ಷಗಳಿಂದ ಬಾಕಿಯಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಗಮನ ಸೆಳೆಯಲು

ನಾಲ್ಕು ವರ್ಷಗಳಿಂದ ನಡೆಯದಿರುವ ನೇಮಕಾತಿ ಪ್ರಕ್ರಿಯೆಗಾಗಿ

13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜೇಷ್ಠಾತಾ ಪಟ್ಟಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇನ್ನಿತರ 15 ಪ್ರಮುಖ ಬೇಡಿಕೆಗಳನ್ನು ವೈದ್ಯರು ಇಟ್ಟುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !