ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಪಿಣರಾಯಿ ವಿಜಯನ್ ಅವರು ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡವರಿಗಾಗಿ ನಿರ್ಮಿಸಲಾದ ಪುನರ್ವಸತಿ ಪ್ರದೇಶಕ್ಕೆ ಮಮ್ಮುಟ್ಟಿ ಭೇಟಿ ನೀಡಿದ ಬಳಿಕ ಈ ವಿವಾದ ಹುಟ್ಟಿಕೊಂಡಿತ್ತು.
ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದ ಮಮ್ಮುಟ್ಟಿ, ಯಾವುದೇ ಪ್ರಚಾರವಿಲ್ಲದೆ ಸರಳವಾಗಿ ವಯನಾಡಿನ ಪುನರ್ವಸತಿ ಪ್ರದೇಶವನ್ನು ಭೇಟಿ ಮಾಡಿದ್ದರು. ಆದರೆ ಅವರ ಜೊತೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ರಫೀಕ್ ಕಾಣಿಸಿಕೊಂಡಿದ್ದು ಕೆಲವರ ಗಮನ ಸೆಳೆಯಿತು.
ಇದನ್ನೂ ಓದಿ:
ಭೇಟಿಯ ವೇಳೆ ಮಮ್ಮುಟ್ಟಿ ರಫೀಕ್ ಅವರಿಗೆ, “ನೀವು ನನ್ನ ಪಕ್ಕದಲ್ಲಿದ್ದರೆ ಜನರು ನಾನು ರಾಜಕೀಯ ಕಾರಣಕ್ಕಾಗಿ ಬಂದಿದ್ದೇನೆ ಎಂದು ಭಾವಿಸಬಹುದು” ಎಂದು ಸೌಮ್ಯವಾಗಿ ದೂರ ನಿಲ್ಲುವಂತೆ ಕೇಳಿಕೊಂಡಿದ್ದರು. ಈ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು.
ಇದಾದ ಬಳಿಕ ಕೆಲವು ಕಾರ್ಯಕರ್ತರು ನಟನ ವಿರುದ್ಧ ಟೀಕೆ ಮಾಡಿದ ಹಿನ್ನೆಲೆ ವಿವಾದ ತೀವ್ರಗೊಂಡಿತು. ಪರಿಸ್ಥಿತಿ ಗಮನಿಸಿದ ಸಿಎಂ ಪಿಣರಾಯಿ ವಿಜಯನ್, ಮಮ್ಮುಟ್ಟಿ ಅವರ ಭೇಟಿ ಜನರ ಹಿತಕ್ಕಾಗಿ ನಡೆದದ್ದು ಎಂದು ಹೇಳಿ, ಅವರಿಗೆ ಉಂಟಾದ ಅಸಮಾಧಾನಕ್ಕಾಗಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದರು.



