April 25, 2026
Saturday, April 25, 2026
spot_img

ಯುದ್ಧ ಯಾವಾಗ ಮುಗಿಯಬೇಕು ಅನ್ನೋದು ನಾವು ನಿರ್ಧರಿಸುತ್ತೇವೆ: ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ನಡುವೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದೆ.

ಯುದ್ಧ ಯಾವಾಗ ಮುಗಿಯಬೇಕು ಎಂಬುದನ್ನು ಅಮೆರಿಕ ನಿರ್ಧರಿಸುವುದಿಲ್ಲ, ಅದು ಸಂಪೂರ್ಣವಾಗಿ ಇರಾನ್‌ನ ಕೈಯಲ್ಲಿದೆ ಎಂದು IRGC ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಇರಾನ್ ವಿರುದ್ಧದ ಯುದ್ಧ ಈಗಾಗಲೇ ಬಹುತೇಕ ಮುಕ್ತಾಯದ ಹಂತ ತಲುಪಿದೆ ಎಂದು ಹೇಳಿದ್ದರು. ಆದರೆ ಬಳಿಕ ಮತ್ತೊಮ್ಮೆ ಮಾತನಾಡಿದ ಅವರು, ಇರಾನ್ ಸಂಪೂರ್ಣವಾಗಿ ಸೋಲುವವರೆಗೂ ಸಂಘರ್ಷ ಮುಂದುವರಿಯಬಹುದು ಎಂಬ ಸೂಚನೆಯನ್ನು ನೀಡಿದ್ದರು.

ಇದನ್ನೂ ಓದಿ:

ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಇರಾನ್‌ನ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರರು, ಯುದ್ಧದ ಅಂತ್ಯವನ್ನು ವಾಷಿಂಗ್ಟನ್ ನಿರ್ಧರಿಸುವುದಿಲ್ಲ ಎಂದು ಕಿಡಿಕಾರಿದರು. ಸಂಘರ್ಷ ಯಾವಾಗ ಮತ್ತು ಹೇಗೆ ಕೊನೆಗೊಳ್ಳಬೇಕು ಎಂಬ ನಿರ್ಧಾರ ಟೆಹ್ರಾನ್ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ತೈಲ ರಫ್ತು ಸಂಪೂರ್ಣವಾಗಿ ತಡೆಯುವ ಸಾಧ್ಯತೆ ಇದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಅಂತಹ ಕ್ರಮ ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ದೊಡ್ಡ ಹೊಡೆತ ನೀಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !