March 11, 2026
Wednesday, March 11, 2026
spot_img

ಪಲ್ಯ, ಗ್ರೇವಿ & More 32 | ಟೊಮ್ಯಾಟೊ-ಬೆಳ್ಳುಳ್ಳಿ ಕಾಂಬಿನೇಷನ್‌ನಲ್ಲಿ ಟೇಸ್ಟಿ ಚಟ್ನಿ, ಅನ್ನಕ್ಕೆ-ಚಪಾತಿಗೆ ಬೆಸ್ಟ್

ಸಾಮಾಗ್ರಿಗಳು
ಟೊಮ್ಯಾಟೊ
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಸಾಸಿವೆ
ಜೀರಿಗೆ
ಮೆಂತ್ಯೆ
ಉದ್ದಿನಬೇಳೆ
ಕರಿಬೇವು
ಒಣಮೆಣಸು
ಹುಣಸೆಹುಳಿ

ಮಾಡುವ ವಿಧಾನ
ಮೊದಲು ಪಾತ್ರೆಗೆ ನಾಲ್ಕು ಟೊಮ್ಯಾಟೊ, ಹುಣಸೆಹಣ್ಣು ಹಾಗೂ ನೀರನ್ನು ಹಾಕಿ ಬಿಸಿ ಮಾಡಿ
ಇದು ಮೆತ್ತಗಾಗಿ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಜೊತೆಗೆ ಖಾರದಪುಡಿ ಹಾಕಿ ರುಬ್ಬಿಕೊಳ್ಳಿ
ಇನ್ನೊಂದು ಕಡೆ ಉದ್ದಿನಬೇಳೆ, ಸಾಸಿವೆ, ಜೀರಿಗೆ ಹಾಗೂ ಮೆಂತ್ಯೆ ಡ್ರೈ ರೋಸ್ಟ್‌ ಮಾಡಿಕೊಳ್ಳಿ
ಅದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ
ಆಮೇಲೆ ಪಾತ್ರೆಗೆ ಎಣ್ಣೆ ಕರಿಬೇವು, ಒಣಮೆಣಸು ಹಾಕಿ ಮಿಕ್ಸಿಯ ಟೊಮ್ಯಾಟೊ ಹಾಕಿ
ನಂತರ ಉಪ್ಪು ಹಾಗೂ ಸ್ವಲ್ಪ ಬೆಲ್ಲ ಹಾಕಿ
ಆಮೇಲೆ ಅದು ಎಣ್ಣೆಬಿಡಲು ಪ್ರಾರಂಭಿಸಿದಾಗಿ ಪುಡಿ ಮಾಡಿಕೊಂಡ ಸಾಸಿವೆ ಮಿಶ್ರಣ ಹಾಕಿ ಆಫ್‌ ಮಾಡಿ ಚಟ್ನಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !