ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗುತ್ತಿದ್ದು, ಹೊಟೇಲ್ ಉದ್ಯಮಗಳು ಆತಂಕದಲ್ಲಿವೆ. ಹೊಟೇಲ್ ಬಂದ್ ಆದ್ರೆ ಜೀವನಕ್ಕೆ ಏನು ಮಾಡೋದು ಎನ್ನುವ ಪ್ರಶ್ನೆ ಕಾಡುತ್ತಿದೆ.
ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು, ಹಲವು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಹೆಚ್ಚು ಗ್ಯಾಸ್ ಬಳಸುವ ಐಟಂಗಳಾದ ಪೂರಿ, ದೋಸೆ ಸೇರಿದಂತೆ ಕೆಲವು ಪ್ರಮುಖ ಉಪಹಾರಗಳನ್ನು ತಯಾರಿಸುವುದನ್ನು ಮಾಲೀಕರು ಸ್ಥಗಿತಗೊಳಿಸಿದ್ದಾರೆ.
ಒಂದೇ ಬಾರಿ ಮಾಡಿ ಇಡುವ ತಿಂಡಿಗಳಾದ ಚಿತ್ರಾನ್ನ, ಪಲಾವ್, ರೈಸ್ಬಾತ್, ಬಿಸಿಬೇಳೆಬಾತ್ ಇನ್ನಿತರ ತಿಂಡಿಗಳನ್ನು ಮಾತ್ರ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರವೂ ಕಡಿಮೆಯಾಗಿದೆ.
ವ್ಯಾಪಾರ ಕಡಿಮೆಯಾದ ಹಿನ್ನೆಲೆ ಹೊಟೇಲ್ ಮಾಲೀಕರು ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡುತ್ತಿದ್ದಾರೆ. ಹೊಟೇಲ್ನಲ್ಲಿ ಮಾಡುವ ಕೆಲಸ ಬಿಟ್ಟು ಇನ್ನೇನೂ ಬಾರದ ಸಿಬ್ಬಂದಿ ಮನೆ ನಡೆಸುವುದು ಹೇಗೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ.
ದೊಡ್ಡ ದೊಡ್ಡ ಹೊಟೇಲ್ಗಳು ಇದಕ್ಕೆ ಹೊರತಾಗಿಲ್ಲ. ಸ್ಟಾಕ್ ಇರುವವರೆಗೂ ಹೊಟೇಲ್ ತೆಗೆದು ನಂತರ ಬಾಗಿಲು ಹಾಕುವ ನಿರ್ಧಾರವನ್ನು ಅವು ಮಾಡಿವೆ. ಇನ್ನು ಬೆಂಗಳೂರಿನ ಅನೇಕ ಕಡೆ ಇದು ಹೋಟೆಲ್ಗಳು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.



