October 19, 2026
Monday, October 19, 2026
spot_img

ಇರಾನ್-ಇಸ್ರೇಲ್ ಯುದ್ಧದ ಬಿಸಿ: ಮಾದಪ್ಪನ ಬೆಟ್ಟದಲ್ಲಿ ಅನ್ನದಾಸೋಹ, ಲಾಡು ಪ್ರಸಾದಕ್ಕೆ ‘ಗ್ಯಾಸ್’ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದ್ದು, ಇದರ ನೇರ ಹೊಡೆತ ಮಲೆ ಮಹದೇಶ್ವರ ಬೆಟ್ಟದ ಅನ್ನದಾಸೋಹ ಹಾಗೂ ಲಾಡು ಪ್ರಸಾದ ತಯಾರಿಕೆಗೆ ಬಿದ್ದಿದೆ.

ದಿನಕ್ಕೆ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್‌ಗಳು ದಾಸೋಹಕ್ಕೆ ಬಳಕೆಯಾಗುತ್ತಿವೆ. ಸದ್ಯ ಒಂದು ವಾರಕ್ಕೆ ಆಗುವಷ್ಟು ದಾಸ್ತಾನು ಇದ್ದರೂ, ಸಮಸ್ಯೆ ಮುಂದುವರೆದರೆ ದಾಸೋಹಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ.

ಮುಂಬರುವ ಯುಗಾದಿ ಜಾತ್ರೆಯ ವೇಳೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಪ್ರತಿದಿನ 2.50 ಲಕ್ಷ ಲಾಡು ತಯಾರಿಸಲು 20ಕ್ಕೂ ಹೆಚ್ಚು ಹಾಗೂ ದಾಸೋಹಕ್ಕೆ 15ಕ್ಕೂ ಹೆಚ್ಚು ಸಿಲಿಂಡರ್‌ಗಳ ಅವಶ್ಯಕತೆಯಿದೆ.

ಗ್ಯಾಸ್ ಕೊರತೆಯಿಂದ ಭಕ್ತರಿಗೆ ಪ್ರಸಾದ ಲಭ್ಯವಾಗದಿರುವ ಆತಂಕ ಎದುರಾಗಿದ್ದು, ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತುರ್ತು ಕ್ರಮಕ್ಕೆ ಕೋರಿದ್ದಾರೆ.

Must Read