ಮೇಷ
ವೃತ್ತಿಗೆ ಸಂಬಂಧಿಸಿ ಶುಭ ಬೆಳವಣಿಗೆ. ದಂಪತಿ ನಡುವಿನ ವಿರಸ ಶಮನಕ್ಕೆ ನಿಧಾನಗತಿ ಹಿಡಿದೀತು. ಬಿಕ್ಕಟ್ಟಿನಲ್ಲಿ ಮೌನಧಾರಣೆ ಒಳ್ಳೆಯದಾದೀತು.
ವೃಷಭ
ಚಿಂತೆ ತಂದ ವಿಷಯವೊಂದು ಇಂದು ಇತ್ಯರ್ಥ ಕಾಣಲಿದೆ. ಹಿರಿಯರ ಮಾತಿಗೆ ಪ್ರತಿಯಾಡದಿರಿ. ಹಣದ ಕೊರತೆ ನೀಗುವುದು.
ಮಿಥುನ
ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಒಳ್ಳೆಯ ಬೆಳವಣಿಗೆ. ಇದರಿಂದ ಮನಸ್ಸಿಗೆ ಉಲ್ಲಾಸ. ಆತ್ಮೀಯರ ಜತೆ ಸಂತೋಷ ಹಂಚಿಕೊಳ್ಳಲು ತುಡಿತ. ಧನಪ್ರಾಪ್ತಿ.
ಕಟಕ
ನಿರಾಶೆ ಬಿಡಿ, ಇಂದು ನಿಮಗೆ ಒಳ್ಳೆಯದಾಗುವ ಕಾಲ. ಚಿಂತೆ ಪರಿಹಾರ, ಆಕಾಂಕ್ಷೆ ಈಡೇರಿಕೆ. ಪ್ರೀತಿಯಲ್ಲಿ ಯಶಸ್ಸು, ಪೂರಕ ಸ್ಪಂದನೆ.
ಸಿಂಹ
ವೃತ್ತಿಯಲ್ಲಿ ಬಯಸಿದ ಬೆಳವಣಿಗೆ. ನಿಮ್ಮ ದೃಢತೆ ಮೆಚ್ಚುಗೆಗೆ ಪಾತ್ರವಾಗಲಿದೆ. ಹೊಸ ವಾಹನ ಖರೀದಿಗೆ ಕಾಲ ಕೂಡಿಬರಲಿದೆ.
ಕನ್ಯಾ
ನಿಮ್ಮ ಕೌಶಲದ ಕೆಲಸಕ್ಕೆ ಮೆಚ್ಚುಗೆ. ವೃತ್ತಿಯ ಸ್ಪರ್ಧೆಯಲ್ಲಿ ಗೆಲ್ಲುವಿರಿ. ದಂಪತಿ ಮಧ್ಯೆ ಅನವಶ್ಯ ಜಗಳವಾದೀತು. ಹೊಂದಾಣಿಕೆಯಿರಲಿ.
ತುಲಾ
ವೃತ್ತಿಯಲ್ಲಿ ಹೊಸ ಯೋಜನೆ ಅಳವಡಿಸಲು ಸಕಾಲ. ಒತ್ತಡವು ನಿಮ್ಮ ಏಕಾಗ್ರತೆಗೆ ಭಂಗ ತಂದೀತು. ಏಕಾಂಗಿಗಳಿಗೆ ವಿವಾಹ ಬಂಧ ಸಂಭವ.
ವೃಶ್ಚಿಕ
ಹೊಸತನಕ್ಕೆ ತುಡಿಯುವಿರಿ. ಜೀವನಶೈಲಿ ಬದಲಿಸಲು ಮನಸ್ಸು ಮಾಡಿ. ಪ್ರಗತಿಗೆ ಅಡ್ಡಿ ಬರುವುದನ್ನು ತ್ಯಜಿಸಿರಿ. ಧನವ್ಯಯ.
ಧನು
ಇತರರ ಜತೆ ಮಾತನಾಡುವಾಗ ಎಚ್ಚರ ವಹಿಸಿ. ಹದತಪ್ಪಿದ ಮಾತು ದೊಡ್ಡ ಜಗಳಕ್ಕೆ ಕಾರಣವಾದೀತು. ಕೌಟುಂಬಿಕ ಬಿಕ್ಕಟ್ಟು.
ಮಕರ
ಅನಪೇಕ್ಷಿತ ಘಟನೆಯ ಕಾರಣದಿಂದ ವಿಶ್ವಾಸದಲ್ಲಿ ಕೊರತೆ. ನಿಮ್ಮ ಸಾಧನೆಗೆ ತೃಪ್ತಿ ಪಡಿ. ಸಾಧ್ಯವಾಗದ್ದಕ್ಕೆ ಕೊರಗುತ್ತಾ ಕೂರದಿರಿ.
ಕುಂಭ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಪಡೆಯುವಿರಿ. ಆತ್ಮೀಯರ ಸ್ನೇಹ ಕಡಿದುಕೊಳ್ಳದಿರಿ. ಸಣ್ಣ ವಿಷಯವನ್ನು ದೊಡ್ಡದು ಮಾಡದಿರಿ.
ಮೀನ
ಮನಸ್ಸಿನ ಶಾಂತಿ ಕಾಯ್ದುಕೊಳ್ಳಿ. ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಬೇಡಿ. ಎಲ್ಲರ ಜತೆ ಹೊಂದಾಣಿಕೆಯಿರಲಿ. ಮಕ್ಕಳ ಸಾಧನೆ ತೃಪ್ತಿಕರ.



