March 13, 2026
Friday, March 13, 2026
spot_img

I Am sorry | ಅಕ್ಷರ್ ಪಟೇಲ್ ಬಳಿ ಕ್ಷಮೆ ಕೇಳಿದ ಕ್ಯಾಪ್ಟನ್: ಯಾಕಂತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಸಂಭ್ರಮಾಚರಣೆ ನಡೆಯುತ್ತಿರುವ ನಡುವೆಯೇ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಮುಗಿದ ಕೆಲ ದಿನಗಳ ಬಳಿಕ ಉಪನಾಯಕ ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿರುವುದಾಗಿ ಬಹಿರಂಗವಾಗಿಹೇಳಿದ್ದಾರೆ.

ಈ ಟೂರ್ನಿಯಲ್ಲಿ ಭಾರತ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ ಇಲೆವನ್‌ನಿಂದ ಹೊರಗಿಡಲಾಗಿತ್ತು. ವಿಶೇಷವಾಗಿ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಮುಖ ಪಂದ್ಯದಲ್ಲಿ ಅಕ್ಷರ್‌ಗೆ ಅವಕಾಶ ನೀಡದ ನಿರ್ಧಾರ ಟೀಂ ಇಂಡಿಯಾಗೆ ದುಬಾರಿಯಾಗಿತ್ತು. ಆ ಪಂದ್ಯದಲ್ಲಿ ಭಾರತ 76 ರನ್‌ಗಳಿಂದ ಸೋಲು ಅನುಭವಿಸಿತ್ತು.

ಇದನ್ನೂ ಓದಿ:

ಅಕ್ಷರ್ ಬದಲಿಗೆ ಅವಕಾಶ ಪಡೆದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪರಿಣಾಮಕಾರಿಯಾಗದ ಕಾರಣ ಅಭಿಮಾನಿಗಳು ಹಾಗೂ ತಜ್ಞರು ನಾಯಕತ್ವದ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ನಿರ್ಧಾರದಿಂದ ಅಕ್ಷರ್ ಕೂಡ ನಿರಾಸೆಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ಆ ನಿರ್ಧಾರ ಸರಿಯಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಪಂದ್ಯದ ಬಳಿಕ ಅಕ್ಷರ್ ಪಟೇಲ್ ಜೊತೆ ಮಾತನಾಡಿ ಕ್ಷಮೆಯಾಚಿಸಿದ್ದಾಗಿ ಅವರು ಹೇಳಿದ್ದಾರೆ. ಆದರೆ ಅಕ್ಷರ್ ತುಂಬಾ ಪ್ರೌಢವಾಗಿ ಪ್ರತಿಕ್ರಿಯಿಸಿ ವಿಷಯವನ್ನು ಅರ್ಥ ಮಾಡಿಕೊಂಡರು ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !