March 13, 2026
Friday, March 13, 2026
spot_img

CINE | ‘ಭೂತ್ ಬಂಗ್ಲ’ ಸಿನಿಮಾ ಟೀಸರ್ ನೋಡಿದ್ರಾ?: ಪಕ್ಕಾ ಹಾರರ್-ಕಾಮಿಡಿ ಎಂಟರ್‌ಟೇನ್‌ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಹಲವು ಕ್ಲಾಸಿಕ್ ಕಾಮಿಡಿ ಸಿನಿಮಾಗಳನ್ನು ನೀಡಿದ ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಜೋಡಿ ಮತ್ತೆ ಒಂದಾಗಿದ್ದು, ಅವರ ಹೊಸ ಸಿನಿಮಾ ‘ಭೂತ್ ಬಂಗ್ಲ’ ಟೀಸರ್ ಬಿಡುಗಡೆಯಾಗಿದೆ. ಸುಮಾರು 14 ವರ್ಷಗಳ ಬಳಿಕ ಈ ಜೋಡಿ ಮತ್ತೆ ಸೇರಿರುವುದು ಸಿನಿಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಈ ಚಿತ್ರ ಹಾರರ್ ಮತ್ತು ಕಾಮಿಡಿ ಮಿಶ್ರಣವಾಗಿದ್ದು, ಟೀಸರ್‌ನಲ್ಲಿ ಭಯ ಮತ್ತು ನಗುವಿನ ಸಂಯೋಜನೆ ಕಾಣಿಸುತ್ತದೆ. ವಿಚಿತ್ರ ಘಟನೆಗಳು ನಡೆಯುವ ಒಂದು ಬಂಗ್ಲಾ ಸುತ್ತ ಕಥೆ ಸಾಗುವ ಸುಳಿವು ಟೀಸರ್‌ನಲ್ಲಿ ನೀಡಲಾಗಿದೆ. ಹಳೆಯ ಶೈಲಿಯ ಮನರಂಜನೆಯನ್ನು ಹೊಸ ರೂಪದಲ್ಲಿ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ:

ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಹಿರಿಯ ಹಾಸ್ಯ ನಟರ ತಂಡ. ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಅಸ್ರಾನಿ ಟೀಸರ್‌ನಲ್ಲಿ ಕಾಣಿಸಿಕೊಂಡು ಹಳೆಯ ಹಿಟ್ ಸಿನಿಮಾಗಳ ನೆನಪನ್ನು ತರುತ್ತಿದೆ. ಅಕ್ಷಯ್ ಕುಮಾರ್ ಜೊತೆ ಟಬು ಹಾಗೂ ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಹುಕಾಲದ ನಂತರ ಅಕ್ಷಯ್ ಮತ್ತು ಟಬು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ವಿಶೇಷವಾಗಿದೆ.

ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿರುವ ಈ ಚಿತ್ರ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ. ‘ಭೂತ್ ಬಂಗ್ಲ’ ಸಿನಿಮಾ ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಟೀಸರ್‌ಗೆ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !