ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್-ಇಸ್ರೇಲ್ ನಡುವಣ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಕಾಡುತ್ತಿದೆ. ಹೊಟೇಲ್‌ಗಳು, ಪಿಜಿಗಳು ಇನ್ನಿತರ ಕಡೆ ಗ್ಯಾಸ್ ಇಲ್ಲದೇ ಊಟ ತಿಂಡಿಗೆ ಸಮಸ್ಯೆಯಾಗಿದೆ. ಈ ಮಧ್ಯೆ ಎಲ್‌ಪಿಜಿ ಇಲ್ಲವಾದ್ರೆ ಕಲ್ಲಿದ್ದಲು ಬಳಕೆ ಮಾಡಿ ಎಂದು ಕೇಂದ್ರ ಸಲಹೆ ನೀಡಿದೆ.
ಮನೆ ಅಥವಾ ಹೊಟೇಲ್‌ಗಳಲ್ಲಿ ಕಲ್ಲಿದ್ದಲು ಇಲ್ಲವಾದರೆ ಸೀಮೆಎಣ್ಣೆ ಬಳಸಿ ಅಡುಗೆ ಮಾಡುವುದು ಉತ್ತಮ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಸಲಹೆ ನೀಡಿದ್ದಾರೆ.
ಸಮಸ್ಯೆಗಳು ಶೀಘ್ರ ಬಗೆಹರಿಯಬೇಕು. ಆದರೆ ಸಮಸ್ಯೆ ಮುಗಿಯಲಿ ಎಂದು ಕಾಯುತ್ತಾ ಸುಮ್ಮನೆ ಕೂರೋಕೆ ಆಗೋದಿಲ್ಲ. ಹೀಗಾಗಿ ನಮ್ಮಲ್ಲಿ ಇರುವ ಸೋರ್ಸ್‌ಗಳ ಬಳಕೆ ಮಾಡಿಕೊಳ್ಳಿ ಎಂದಿದ್ದಾರೆ.
ಸರ್ಕಾರದ ಪ್ರಕಾರ ದೇಶದಾದ್ಯಂತ ಇರುವ ಸುಮಾರು 25,000 ಎಲ್‌ಪಿಜಿ ವಿತರಕರಲ್ಲಿ ಯಾವುದೇ ಸ್ಥಳದಲ್ಲೂ ಸಂಪೂರ್ಣ ಅನಿಲ ಕೊರತೆ ಉಂಟಾಗಿಲ್ಲ. ಆದರೆ, ಜನರು ಭಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬುಕ್ಕಿಂಗ್ ಮಾಡುತ್ತಿರುವುದು ಮುಖ್ಯ ಸಮಸ್ಯೆಯಾಗಿದೆ ಎಂದು ಹೇಳಿದೆ.
ದೇಶದಲ್ಲಿ ಪೈಪ್ ಮೂಲಕ ಸರಬರಾಜಾಗುವ ಪಿಎನ್‌ಜಿ ಅನಿಲದ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪಿಎನ್‌ಜಿ ಸಂಪರ್ಕ ಇರುವ ಮನೆಗಳು ಎಲ್‌ಪಿಜಿ ಬಳಕೆಯನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಪಿಎನ್‌ಜಿ ಅನಿಲವನ್ನು ಬಳಖೆ ಮಾಡಬಹುದು ಎಂದು ಸಲಹೆ ನೀಡಿದೆ.



