August 17, 2026
Monday, August 17, 2026
spot_img

ಲೋಕಸಭೆಯಲ್ಲಿ ಜೆನ್-ಝಡ್ ಭಾಷೆಯಲ್ಲೇ ಕಾಂಗ್ರೆಸ್‌ಗೆ ಸವಾಲೆಸೆದ ಬಾನ್ಸುರಿ ಸ್ವರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ತೀವ್ರ ಸದ್ದು ಮಾಡಿದ್ದ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಚರ್ಚೆಯ ನೇತೃತ್ವ ವಹಿಸಿದ್ದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಜೆನ್-ಝಡ್ (Gen Z) ಯುವಕರ ಜನಪ್ರಿಯ ಶೈಲಿಯಲ್ಲಿ ಮಾತನಾಡಿದರು. “ಹಿಂದಿನ ಯುಪಿಎ ಆಡಳಿತದ ನೀತಿಶೂನ್ಯತೆಯನ್ನು ಪ್ರಧಾನಿ ಮೋದಿ ಸರಿಯಾಗಿ ಗ್ರಹಿಸಿ (Modi Ji Clocked It) ಸೂಕ್ತ ಪರಿಹಾರ ನೀಡಿದ್ದಾರೆ” ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.

ಕಠಿಣ ಶಿಕ್ಷೆ ಮತ್ತು ಭಾರೀ ದಂಡ

ದೇಶದ ಯುವ ಭವಿಷ್ಯದ ಜೊತೆ ಆಟವಾಡುವ ಪರೀಕ್ಷಾ ಮಾಫಿಯಾವನ್ನು ಮಟ್ಟಹಾಕಲು ಈ ನೂತನ ಕಾನೂನು ಶಕ್ತಿ ನೀಡಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಕೊಳ್ಳುವ ಅಪರಾಧಿಗಳಿಗೆ ಬಾರೀ ಆಘಾತ ಕಾಯುತ್ತಿದೆ. ನೂತನ ಕರಡು ಪ್ರಕಾರ, ಅಪರಾಧಿಗಳಿಗೆ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ₹50 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಜಾಗ ಮಾಡಿಕೊಡಲಾಗಿದೆ.

ಫಾಸ್ಟ್-ಟ್ರ್ಯಾಕ್ ಕೋರ್ಟ್ ಹಾಗೂ ವಿಶೇಷ ಪಡೆ

ಕೇವಲ ಶಿಕ್ಷೆಯಷ್ಟೇ ಅಲ್ಲದೆ, ಇಂತಹ ಗಂಭೀರ ಅಪರಾಧಗಳ ಶೀಘ್ರ ತನಿಖೆಗಾಗಿ ವಿಶೇಷ ಕಾರ್ಯಪಡೆ ರಚನೆಗೆ ಪ್ರಸ್ತಾವಿಸಲಾಗಿದೆ. ಜೊತೆಗೆ, ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ‘ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು’ ಸ್ಥಾಪಿಸಲು ವಿಧೇಯಕದಲ್ಲಿ ನಿರ್ಧರಿಸಲಾಗಿದೆ. ಯುವಜನರ ಹಿತರಕ್ಷಣೆಗಾಗಿ ಎನ್‌ಡಿಎ ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !