ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವರಕೊಡುನಲ್ಲಿ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ.
ವರುಣ ಕ್ಷೇತ್ರದ ವರಕೊಡುನಲ್ಲಿ ದೊಡ್ಡ ಜಾತ್ರೆ ನಡೆಯಿತು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇತ್ತು. ಪ್ರಸಾದ ತಯಾರಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಪ್ರಭಾವ ಬಳಸಿ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಸುಮಾರು 200-250 ಸಿಲಿಂಡರ್ ಅನ್ನು ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಜಾತ್ರೆಗೆ ಕೊಡಿಸಿದ್ದಾರೆ.
ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣಗೌಡ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಸಿಎಂ ಮನಸ್ಸು ಮಾಡಿದರೆ ಏನೂ ಬೇಕಾದರು ಆಗುತ್ತದೆ. ಜಾತ್ರೆಗೂ ಎರಡು ದಿನ ಮೊದಲೇ ಡಿಸಿ ಜೊತೆ ಮಾತನಾಡಿ ಸಿಲಿಂಡರ್ ಕೊಡಿಸಿದ್ದಾರೆ. ಜಾತ್ರೆ ಸುಸೂತ್ರವಾಗಿ ನಡೆದಿದೆ ಎಂದು ಹೇಳಿದ್ದಾರೆ.



