ಈ ಜೆನ್ ಝೀಗಳ ವೈಬ್ ಹೀಗೆ ನೋಡಿ, ಯಾವ ಕ್ಷಣಕ್ಕೆ ಯಾವ ವಿಷಯವನ್ನು ಫೇಮಸ್ ಮಾಡ್ತಾರೆ, ವೈರಲ್ ಮಾಡ್ತಾರೆ ಅಂತ ಹೇಳೋಕೆ ಆಗೋದಿಲ್ಲ. ಸಣ್ಣ ಲೈಟ್ ಅಥವಾ ಕತ್ತಲಿನಲ್ಲೇ ಇರೋಕೆ ಇಷ್ಟಪಡುವ ಇವರು ಇದೀಗ ಬಿರು ಬಿಸಿಲಿನಲ್ಲಿ ಪಾರ್ಟಿ ಮಾಡೋಕೆ ಪೂಲ್‌ಗೆ ಇಳಿದಿದ್ದಾರೆ.

ದಶಕಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಿದ್ದ ಈ ಪೂಲ್ ಪಾರ್ಟಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲಿಯೂ ಈ ಬೇಸಿಗೆಯನ್ನು ತಣಿಸೋದಕ್ಕೆ ಜನ ನೀರಿನಲ್ಲೇ ಇರೋದಕ್ಕೆ ಇಷ್ಟಪಡ್ತಾರೆ. ಅದಕ್ಕೆ ಪೂಲ್ ಪಾರ್ಟಿ ಹೇಳಿ ಮಾಡಿಸಿದಂತಿದೆ.

ಪೂಲ್ ಪಾರ್ಟಿ ಇಂಡೋರ್ ಹಾಗೂ ಔಟ್‌ಡೋರ್ ಎರಡರಲ್ಲೂ ಇದೆ. ಇದೀಗ ಇಂಡೋರ್ ಪಾರ್ಟಿ ಯಾರೂ ಇಷ್ಟಪಡೋದಿಲ್ಲ. ಔಟ್‌ಡೋರ್ ಪಾರ್ಟಿಯನ್ನ ಇಷ್ಟಪಡ್ತಾರೆ. ಇದಕ್ಕೆ ಇವರದ್ದೇ ಡ್ರೆಸ್‌ಕೋಡ್ ಇರುತ್ತದೆ.

ರೆಸಾರ್ಟ್ ಅಥವಾ ಇನ್ನಿತರ ಪ್ರದೇಶಗಳಲ್ಲಿ ಪಾರ್ಟಿ ಹೋಸ್ಟ್ ಮಾಡಲಾಗುತ್ತದೆ. ಪೂಲ್‌ನ ಅಕ್ಕಪಕ್ಕದಲ್ಲೇ ಜ್ಯೂಸ್, ಸ್ನಾಕ್ಸ್ ಇರುತ್ತದೆ. ಡಿಜೆ ಮ್ಯೂಸಿಕ್ ಇರುತ್ತದೆ. ಇಲ್ಲಿ ಜನರು ನೀರಿಗಿಳಿದು ತಮ್ಮ ಜ್ಯೂಸ್ ಎಂಜಾಯ್ ಮಾಡುತ್ತಾ, ಮಾತನಾಡುತ್ತಾ ಪಾರ್ಟಿ ಮಾಡುತ್ತಾರೆ.
ಪೂಲ್ ಪಾರ್ಟಿಗಳು ಬರೀ ಸಮ್ಮರ್‌ನಲ್ಲಿ ಮಾತ್ರ ಇರುತ್ತವೆ. ಫ್ಯಾಮಿಲಿ, ಫ್ರೆಂಡ್ಸ್, ಬರ್ಥ್‌ಡೇ, ಆನಿವರ್ಸರಿ ಆಚರಣೆಗಾಗಿ ಈ ರೀತಿ ಪಾರ್ಟಿ ಮಾಡುತ್ತಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.



