May 27, 2026
Wednesday, May 27, 2026
spot_img

Summer Drinks | ಕೂಲ್ ಕೂಲ್ ಸಮ್ಮರ್ ಡ್ರಿಂಕ್ ಫ್ರೆಶ್ ಲೈಮ್ ಸೋಡಾ, ಒಂದು ಟ್ವಿಸ್ಟ್ ಜೊತೆಗೆ

ಬೇಸಿಗೆ ಬಂದಾಕ್ಷಣ ದಾಹ ಹೆಚ್ಚು, ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯಗಳ ಬೇಡಿಕೆಯೂ ಹೆಚ್ಚಾಗುತ್ತದೆ ಅಲ್ವಾ! ಅಂಥ ಸಮಯದಲ್ಲಿ ತಕ್ಷಣ ಫ್ರೆಶ್ ಆಗಿ ಫೀಲ್ ಕೊಡಿಸುವ ಡ್ರಿಂಕ್ ಎಂದರೆ ಫ್ರೆಶ್ ಲೈಮ್ ಸೋಡಾ. ಮಾಮೂಲಿಗಿಂತ ಇನ್ನೂ ಸ್ವಲ್ಪ ಸ್ಪೆಷಲ್ ಮಾಡಲು ಒಂದು ಸಣ್ಣ ಟ್ವಿಸ್ಟ್ ಸೇರಿಸಿದರೆ ಇದರ ರುಚಿ ಮತ್ತಷ್ಟು ಅದ್ಭುತವಾಗುತ್ತದೆ. ಮನೆಯಲ್ಲೇ ಕೆಲವೇ ಪದಾರ್ಥಗಳಿಂದ ಈ ಕೂಲ್ ಕೂಲ್ ಸಮ್ಮರ್ ಡ್ರಿಂಕ್ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ನಿಂಬೆಹಣ್ಣು – 2
ಸೋಡಾ – 1 ಗ್ಲಾಸ್
ಸಕ್ಕರೆ ಅಥವಾ ಜೇನು – 2 ಚಮಚ
ಕಪ್ಪು ಉಪ್ಪು – ಚಿಟಿಕೆ
ಪುದೀನಾ ಎಲೆಗಳು – ಸ್ವಲ್ಪ
ಐಸ್ ಕ್ಯೂಬ್‌ – ಬೇಕಾದಷ್ಟು
ಶುಂಠಿ ರಸ – 1 ಚಮಚ

ಮಾಡುವ ವಿಧಾನ

ಮೊದಲು ಒಂದು ಗ್ಲಾಸ್ ತೆಗೆದುಕೊಂಡು ಅದರಲ್ಲಿ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಅಥವಾ ಜೇನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದಾದ ಬಳಿಕ ಚಿಟಿಕೆ ಕಪ್ಪು ಉಪ್ಪು, ಶುಂಠಿ ರಸ ಮತ್ತು ಸ್ವಲ್ಪ ಪುದೀನಾ ಎಲೆಗಳನ್ನು ಕಟ್ ಮಾಡಿ ಸೇರಿಸಿ. ಈಗ ಐಸ್ ಕ್ಯೂಬ್‌ಗಳನ್ನು ಹಾಕಿ ಮೇಲಿನಿಂದ ತಣ್ಣನೆಯ ಸೋಡಾವನ್ನು ನಿಧಾನವಾಗಿ ಸುರಿಯಿರಿ.

ಚಮಚದಿಂದ ನಿಧಾನವಾಗಿ ಕಲಸಿದರೆ ರುಚಿಕರವಾದ ಫ್ರೆಶ್ ಲೈಮ್ ಸೋಡಾ ಸಿದ್ಧವಾಗುತ್ತದೆ. ಮೇಲೆ ಸ್ವಲ್ಪ ಪುದೀನಾ ಎಲೆಗಳನ್ನು ಹಾಕಿ ಸರ್ವ್ ಮಾಡಿದರೆ ಇನ್ನೂ ಆಕರ್ಷಕವಾಗಿ ಕಾಣುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !