ಬೇಕಾಗುವ ಸಾಮಗ್ರಿಗಳು:
ಓಟ್ಸ್
ಹಾಲು
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಗೋಡಂಬಿ, ದ್ರಾಕ್ಷಿ, ಬಾದಾಮಿ
ಬಾಣಲೆಯಲ್ಲಿ 1 ಚಮಚ ತುಪ್ಪ ಕಾಯಿಸಿ, ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಹೊಂಬಣ್ಣಕ್ಕೆ ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಗೆ ಓಟ್ಸ್ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹುರಿದ ಓಟ್ಸ್ಗೆ ಹಾಲು ಸೇರಿಸಿ, ಸಣ್ಣ ಉರಿಯಲ್ಲಿ 4-5 ನಿಮಿಷ ಬೇಯಿಸಿ. ಓಟ್ಸ್ ಬೇಗನೆ ಮೆತ್ತಗಾಗುತ್ತದೆ. ಓಟ್ಸ್ ಬೆಂದ ನಂತರ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ. ಒಲೆಯಿಂದ ಕೆಳಗಿಳಿಸಿ, ಮೇಲೆ ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಮತ್ತು ಉಳಿದ 1 ಚಮಚ ತುಪ್ಪ ಸೇರಿಸಿದರೆ ಬಿಸಿಬಿಸಿಯಾದ, ಕ್ರೀಮಿ ಓಟ್ಸ್ ಪಾಯಸ ಸವಿಯಲು ಸಿದ್ಧ!



