ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಕೆಲವೇ ದಿನಗಳಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬ ಬರುತ್ತಿದ್ದು, ಎಲ್ಲಡೆ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ನಾನಾ ಊರಿನಲ್ಲಿರುವ ಜನರಿಗೆ ಹಬ್ಬಕ್ಕಾಗಿ ತಮ್ಮ ಮನೆಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಸಾಥ್ ನೀಡಲು ಮುಂದಾಗಿದೆ.
ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಮಾರ್ಚ್ 18ರಿಂದ ರಾಜ್ಯಾದ್ಯಂತ ಒಟ್ಟು 2,000 ವಿಶೇಷ ಹೆಚ್ಚುವರಿ ಬಸ್‌ಗಳು ಸಂಚರಿಸಲಿದೆ .
ಪ್ರಮಾರ್ಚ್ 18ರಿಂದ ಮಾರ್ಚ್ 20ರವರೆಗೆ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ ರಾಜ್ಯದ ಪ್ರಮುಖ ನಗರಗಳು ಹಾಗೂ ನೆರೆ ರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ.
ಅದೇ ರೀತಿ ಊರಿನಿಂದ ಮರುವವರಿಗಾಗಿ ಮಾರ್ಚ್ 22 ರಂದು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಮರಳಲು ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ನಿಂದ ಶಿವಮೊಗ್ಗ, ಹಾಸನ, ಧರ್ಮಸ್ಥಳ, ಮಂಗಳೂರು, ಶೃಂಗೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬಳ್ಳಾರಿ, ಕಲಬುರಗಿ ಹಾಗೂ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ನಗರಗಳಿಗೆ ವಿಶೇಷ ಬಸ್ ಓಡಾಡಲಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ ಹಾಗೂ ವಿರಾಜಪೇಟೆ ಮಾರ್ಗದಬಸ್ ಸಂಚರಿಸಲಿದೆ.
ಇದೇ ವೇಳೆ ಪ್ರಯಾಣಿಕರಿಗೆ ಟೆಕೆಟ್ ನಲ್ಲೂ ವಿಶೇಷ ರಿಯಾತಿಯನ್ನು ಕೂಡ ಘೋಷಿಸಿದೆ.



