ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಗೆ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.2 ಓವರ್ಗಳಲ್ಲಿ ಸರ್ವಪತನ ಕಂಡು ಕೇವಲ 155 ರನ್ಗಳಿಸಿದೆ .
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರಿಗೆ ಸ್ಫೋಟಕ ಆರಂಭ ಸಿಕ್ಕರೂ ದೊಡ್ಡ ರನ್ ಗಳಿಸುವಲ್ಲಿ ವಿಫಲವಾಯಿತು. ಕೊಹ್ಲಿ ಮತ್ತು ಜಾಕೋಬ್ ಬೆಥಲ್ ಇಬ್ಬರ ನಡುವೆ ಮೊದಲ ವಿಕೆಟ್ ಗೆ 34 ರನ್ ಗಳ ಜೊತೆಯಾಟ ಆಡಿದರು. ಬೆಥೆಲ್ ಕೇವಲ 5 ರನ್ ಗಳಿಸಿ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 28 ರನ್ ಗಳಿಸಿ ರಶೀದ್ ಖಾನ್ಗೆ ಕ್ಯಾಚ್ ನೀಡಿದರು.
ನಾಯಕ ರಜತ್ ಪಾಟೀದಾರ್ 19 ರನ್ ಗಳಿಸಿ ಔಟಾದರು. ಕಳಪೆ ಪಾರ್ಮ್ನಲ್ಲಿರುವ ಜಿತೇಶ್ ಮತ್ತೊಮ್ಮೆ ಕೇವಲ 1 ರನ್ಗಳಿಸಿ ನಿರಾಶೆ ಮೂಡಿಸಿದರು. ಟಿಮ್ ಡೇವಿಡ್ ಕೇವಲ ಒಂಬತ್ತು ರನ್ ಗಳಿಸಿದರು. ಕೃನಾಲ್ 4 ರನ್ ಗಳಿಸಿದದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೆ, ಅತ್ತ ದೇವದತ್ ಪಡಿಕ್ಕಲ್ ತಂಡಕ್ಕೆ ಮೊತ್ತ ಹೆಚ್ಚಿಸಲು ಪರದಾಡಿದರು. ಅಂತಿಮವಾಗಿ 24 ಎಸೆತಗಳಲ್ಲಿ 40 ರನ್ ಗಳಿಸಿದರು. ಈ ಮೂಲಕ ಟೀಮ್ ಮೊತ್ತ 150 ಗಡಿ ದಾಟಿತು.



