March 16, 2026
Monday, March 16, 2026
spot_img

ಕಾಂತಾರ, ಮಹಾವತಾರ್ ನರಸಿಂಹಕ್ಕೆ ಆಸ್ಕರ್ ಮಿಸ್ ಆಗಿದ್ಯಾಕೆ?: ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯೋಕೆ ಹೆವಿ ಪೈಪೋಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಹಾಲಿವುಡ್ ಅಂಗಳದಲ್ಲಿ ಆಸ್ಕರ್ ಪ್ರಶಸ್ತಿ ಎಂದಾಗಲೇ ಸಿನಿಮಾ ಲೋಕದಲ್ಲಿ ದೊಡ್ಡ ಸ್ಪರ್ಧೆ ಆರಂಭವಾಗುತ್ತದೆ. ಈ ವರ್ಷವೂ ಭಾರತೀಯ ಚಿತ್ರರಂಗದ ಕೆಲವು ಚಿತ್ರಗಳು ಆಸ್ಕರ್ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿದ್ದು, ಕನಿಷ್ಠ ಹೆಮ್ಮೆಯ ವಿಚಾರವಾಗಿದೆ. ಕನ್ನಡದ ಕಾಂತಾರ ಚಾಪ್ಟರ್ ಒನ್, ಮಹಾವತಾರ್ ನರಸಿಂಹ, ಮತ್ತು ತನ್ವಿ ದಿ ಗ್ರೇಟ್ ಚಿತ್ರಗಳು 2026 ರ ಆಸ್ಕರ್ ಪ್ರಶಸ್ತಿಗೆ ನಾಮಿನೇಷನ್ ಅರ್ಜಿ ಸಲ್ಲಿಸಿದ್ದವು.

ಕಾಂತಾರ ಚಾಪ್ಟರ್ ಒನ್ ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಸಂಸ್ಥೆ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿತ್ತು. ಮಹಾವತಾರ್ ನರಸಿಂಹ ಹಾಗೂ ತನ್ವಿ ದಿ ಗ್ರೇಟ್ ಚಿತ್ರಗಳು ಸಹ ಈ ಮಾರ್ಗದಲ್ಲಿ ಸೇರಿವೆ. ಆದರೆ, ಪ್ರತಿ ವರ್ಷವೂ ವಿಶ್ವದ 80ಕ್ಕೂ ಹೆಚ್ಚು ದೇಶಗಳ ಚಿತ್ರಗಳು ಸ್ಪರ್ಧಿಸುತ್ತಿರುವ ಕಾರಣ, ಭಾರತೀಯ ಚಿತ್ರಗಳಿಗೆ ಪ್ರತಿ ವರ್ಷ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ.

ಇದನ್ನೂ ಓದಿ:

ಆಸ್ಕರ್ ಅಂಗಳಕ್ಕೆ ಕಾಲಿಡಲು ಚಿತ್ರಗಳು ಉತ್ತಮ ಪ್ರಮೋಶನ್ ಪಡೆಯಬೇಕು. ಬಾಲಿವುಡ್ ಸಿನಿಮಾ ರೀಚ್ ಹೊಂದಿದ್ದರೂ, ಕೆಲವು ಭಾರತೀಯ ಚಿತ್ರಗಳು ಅಮೆರಿಕಾದಲ್ಲಿ ಕಡಿಮೆ ಪ್ರಸಿದ್ಧವಾಗಿದ್ದು ಜೂರಿಗಳ ಗಮನ ಸೆಳೆಯಲು ವಿಫಲವಾಗುತ್ತವೆ. ಹೋಮ್‌ ಬೌಂಡ್ ಸಿನಿಮಾ ಆಸ್ಕರ್ ಅಂಗಳದಲ್ಲಿ ಒಂದು ಹಂತಕ್ಕೆ ಸೌಂಡ್ ಮಾಡಿದೆ. ಆಸ್ಕರ್ ಪ್ರಶಸ್ತಿಯ ಟಾಪ್ 15 ಚಿತ್ರಗಳ ಪಟ್ಟಿಯಲ್ಲೂ ಬಂದಿದೆ. ಆದರೆ, ಕೊನೆ ಟಾಪ್-5 ಪಟ್ಟಿಯಲ್ಲಿ ಬರುವಲ್ಲಿ ವಿಫಲೊಂಡಿದೆ. ಮಹಾವತಾರ್ ನರಸಿಂಹ ಟಾಪ್ 15 ಪಟ್ಟಿಯಲ್ಲಿ ಸೇರಿದರೂ, ಕೊನೆ ಟಾಪ್-5 ನಲ್ಲಿ ಸ್ಥಾನ ಪಡೆಯಲಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !