May 21, 2026
Thursday, May 21, 2026
spot_img

FOOD | ಇಷ್ಟ ಇಲ್ಲ ಅನ್ನೋರು ಕೂಡ ಬಾಯಿ ಚಪ್ಪರಿಸಿಕೊಂಡು ತಿಂತಾರೆ ಈ ಹಾಗಲಕಾಯಿ ಪೆಪ್ಪರ್ ಫ್ರೈ

ಹಾಗಲಕಾಯಿ ಆರೋಗ್ಯಕ್ಕೆ ಉತ್ತಮವಾದ ತರಕಾರಿ. ಇದು ಕಡಿಮೆ ಕ್ಯಾಲೊರಿ, ಹೈ ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಈ ಹಾಗಲಕಾಯಿಯ ಪೆಪ್ಪರ್ ಫ್ರೈ ರೆಸಿಪಿ ಟ್ರೈ ಮಾಡಿ. ಚೆನ್ನಾಗಿರುತ್ತೆ.

ಬೇಕಾಗುವ ಸಾಮಗ್ರಿಗಳು:

ಹಾಕಲಕಾಯಿ – 2
ಎಣ್ಣೆ – 2 ಟೇಬಲ್‌ಸ್ಪೂನ್
ಬೆಳ್ಳುಳ್ಳಿ – 4 ಎಸಳು
ಕಾಳುಮೆಣಸಿನ ಪುಡಿ – 1/2 ಟೀಸ್ಪೂನ್
ಅರಶಿನ ಪುಡಿ – 1/4 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಶುಂಠಿ – 1/2 ಇಂಚು
ಕರಿಬೇವು, ಹಸಿರು ಮೆಣಸಿನಕಾಯಿ – ಸ್ವಲ್ಪ

ತಯಾರಿಕೆ ವಿಧಾನ:

ಹಾಕಲಕಾಯಿ ತುಂಡುಗಳನ್ನು ಸ್ವಚ್ಚವಾಗಿ ತೊಳೆಯಿರಿ ಮತ್ತು ಸಣ್ಣ ತುಂಡುಗಳಲ್ಲಿ ಕತ್ತರಿಸಿ.

ಒಂದು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ.

ಅರಶಿನ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ.

ಈಗ ಹಾಕಲಕಾಯಿ ತುಂಡುಗಳನ್ನು ಹಾಕಿ, ಬೇಯುವವರೆಗೆ ಮಧ್ಯಮ ಬೆಂಕಿಯಲ್ಲಿ ಫ್ರೈ ಮಾಡಿರಿ.

ಕೊನೆಗೆ ಕರಿಬೇವು ಮತ್ತು ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !