ಹೊಸದಿಗಂತ ವರದಿ ಅಂಕೋಲಾ:
ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಯುವಕನೋರ್ವನನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ವಂದಿಗೆ ಹೊಸಗದ್ದೆ ನಿವಾಸಿ ಅಕ್ಷಯಕುಮಾರ ಗೋಯ್ದು ಗೊಂಡ(25) ಬಂಧಿತ ವ್ಯಕ್ತಿಯಾಗಿದ್ದು ಆಟೋ ಚಾಲಕನಾಗಿರುವ ಈತ ಜಿ.ಸಿ.ಕಾಲೇಜು ಪ್ಲೈ ಓವರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ರೀತಿಯಲ್ಲಿ ಕಂಡು ಬಂದಿದ್ದ.
ಅಂಕೋಲಾ ಪಿ.ಎಸ್.ಐ ಗುರುನಾಥ ಹಾದಿಮನಿ ವಿಚಾರಣೆ ನಡೆಸಿದಾಗ ಬಾಯಿಂದ ಘಾಟು ವಾಸನೆ ಬರುತ್ತಿದ್ದು ವಿಚಾರಣೆ ಸಂದರ್ಭದಲ್ಲಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿತನನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಆತ ಗಾಂಜಾ ಸೇವನೆ ಮಾಡಿರುವುದು ಪರೀಕ್ಷಾ ವರದಿಯಲ್ಲಿ ದೃಡಪಟ್ಟಿದೆ.
ಈ ಕುರಿತಂತೆ ಪಿ.ಎಸ್.ಐ ಗುರುನಾಥ ಹಾದಿಮನಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



