July 16, 2026
Thursday, July 16, 2026
spot_img

ದೇಶಾದ್ಯಂತ ಎಲ್‌ಪಿಜಿ ಹಾಹಾಕಾರ: ಅಡುಗೆ ಮನೆಯ ಪ್ಲ್ಯಾನ್ ಬಿ ರೆಡಿ ಮಾಡಿದ ಬಾಲಿವುಡ್ ‘ಖಿಲಾಡಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರ್ಮೋಡಗಳು ಈಗ ಭಾರತದ ಅಡುಗೆಮನೆಗಳ ಮೇಲೆ ಪ್ರಭಾವ ಬೀರುತ್ತಿವೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಈ ಬಿಸಿ ಈಗ ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ತಟ್ಟಿದೆ.

ಈ ಗ್ಯಾಸ್ ಬಿಕ್ಕಟ್ಟಿನ ಬಗ್ಗೆ ಸ್ವತಃ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. “ಸದ್ಯಕ್ಕೆ ನಮ್ಮ ಮನೆಯಲ್ಲಿ ಅನಿಲದ ಕೊರತೆ ಇಲ್ಲದಿದ್ದರೂ, ಭವಿಷ್ಯದ ಮುನ್ನೆಚ್ಚರಿಕೆಯಾಗಿ ನನ್ನ ಪತ್ನಿ ಟ್ವಿಂಕಲ್ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ಖರೀದಿಸಿದ್ದಾರೆ. ಒಂದು ವೇಳೆ ಅನಿಲ ಪೂರೈಕೆ ಸಂಪೂರ್ಣ ಸ್ಥಗಿತಗೊಂಡರೆ ಅಡುಗೆಗೆ ತೊಂದರೆಯಾಗಬಾರದು ಎಂಬುದು ಅವರ ಆಲೋಚನೆ,” ಎಂದು ಅಕ್ಷಯ್ ತಿಳಿಸಿದ್ದಾರೆ. ಉತ್ತಮ ಅಡುಗೆಯವನೂ ಆಗಿರುವ ಅಕ್ಷಯ್, ಇನ್ಮುಂದೆ ತಮ್ಮ ಮಕ್ಕಳಿಗೆ ನೆಚ್ಚಿನ ‘ಚಾಕೊಲೇಟ್ ಪರಾಠ’ವನ್ನು ಇಂಡಕ್ಷನ್ ಮೇಲೆಯೇ ತಯಾರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಪರಿಸ್ಥಿತಿಯನ್ನು ಗಮನಿಸಿರುವ ಸರ್ಕಾರ, ಜನರು ಅನಗತ್ಯವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಬಾರದು ಎಂದು ಮನವಿ ಮಾಡಿದೆ. ಸಾಧ್ಯವಾದಷ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಅಥವಾ ವಿದ್ಯುತ್ ಒಲೆಗಳನ್ನು ಬಳಸುವಂತೆ ಸೂಚನೆ ನೀಡಿದೆ. ಅಕ್ಷಯ್ ಕುಮಾರ್ ಅವರ ಈ ನಿರ್ಧಾರ ಈಗ ಬಾಲಿವುಡ್‌ನ ಇತರ ತಾರೆಯರಿಗೂ ಸ್ಫೂರ್ತಿಯಾಗಿದ್ದು, ಅನೇಕರು ತಮ್ಮ ಅಡುಗೆಮನೆಗಳನ್ನು ‘ಎಲೆಕ್ಟ್ರಿಕ್ ಮಯ’ ಮಾಡಲು ಮುಂದಾಗುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !