March 18, 2026
Wednesday, March 18, 2026
spot_img

ನನ್ನ ಘನತೆಗೆ ಧಕ್ಕೆ ತಂದಿದ್ದಾರೆ: ‘KD’ ಚಿತ್ರತಂಡದ ವಿರುದ್ಧ ಬಾಲಿವುಡ್ ಬೆಡಗಿ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧ್ರುವ ಸರ್ಜಾ ನಟನೆಯ, ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಇತ್ತೀಚೆಗೆ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಿಂದಿ ಅವತರಣಿಕೆಯನ್ನು ಡಿಲೀಟ್ ಮಾಡಲಾಗಿತ್ತು. ಇದೀಗ ಈ ಕುರಿತು ನಟಿ ನೋರಾ ಫತೇಹಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

“ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ನನಗೆ ಕನ್ನಡ ತಿಳಿಯದ ಕಾರಣ ಚಿತ್ರತಂಡ ನೀಡಿದ ಭಾಷಾಂತರವನ್ನೇ ನಂಬಿದ್ದೆ. ಆಗ ನನಗೆ ಇದರಲ್ಲಿ ಯಾವುದೇ ಅಶ್ಲೀಲತೆ ಕಂಡುಬಂದಿರಲಿಲ್ಲ,” ಎಂದು ನೋರಾ ಹೇಳಿದ್ದಾರೆ.

ಹಿಂದಿಗೆ ಭಾಷಾಂತರ ಮಾಡುವಾಗ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ. ಈ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ ಮತ್ತು ನನ್ನ ಅನುಮತಿಯನ್ನೂ ಪಡೆದಿಲ್ಲ ಎಂದು ಅವರು ದೂರಿದ್ದಾರೆ.

ಪ್ರಚಾರದ ಸಮಯದಲ್ಲಿ ನೋರಾ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು AI ಮೂಲಕ ಸೃಷ್ಟಿಸಿ ಅಸಭ್ಯವಾಗಿ ಬಳಸಲಾಗಿದೆ. ಇದು ನಟಿಯ ಕೆಂಗಣ್ಣಿಗೆ ಗುರಿಯಾಗಿದೆ.

https://www.instagram.com/reel/DWBRIz5DIZJ/?utm_source=ig_web_copy_link

“ಹಾಡು ಬಿಡುಗಡೆಯಾದಾಗಲೇ ಇದು ವಿವಾದವಾಗುತ್ತದೆ ಎಂದು ನನಗೆ ಅರ್ಥವಾಗಿತ್ತು. ಕೂಡಲೇ ನಾನು ನಿರ್ದೇಶಕರಿಗೆ ಎಚ್ಚರಿಕೆ ನೀಡಿದೆ. ನನ್ನ ಘನತೆಗೆ ಧಕ್ಕೆ ತರುವ ಇಂತಹ ಹಾಡನ್ನು ನಾನು ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ,” ಎಂದು ನೋರಾ ವಿವರಿಸಿದ್ದಾರೆ.

ಕೊನೆಯದಾಗಿ ಮಾತನಾಡಿದ ಅವರು, “ಕಲಾವಿದರಾದ ನಮಗೆ ಇಂತಹ ವಿಷಯಗಳಲ್ಲಿ ಹೆಚ್ಚಿನ ಅಧಿಕಾರ ಇರುವುದಿಲ್ಲ. ಜನಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಇಂತಹ ತಪ್ಪುಗಳಾದಾಗ ಚಿತ್ರತಂಡವನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು. ಇನ್ಮುಂದೆ ನಾನು ಇಂತಹ ವಿಷಯಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತೇನೆ,” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !