September 30, 2026
Wednesday, September 30, 2026
spot_img

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ನಿಮ್ಮ ಸೀಟುಗಳ ಆಯ್ಕೆ ಸಂಪೂರ್ಣ ಉಚಿತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಮಾನಗಳಲ್ಲಿ ಸೀಟುಗಳ ಆಯ್ಕೆಗಾಗಿ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲು ವಿಮಾನಯಾನ ಸಚಿವಾಲಯ ಮುಂದಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ವಿಮಾನದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಸೀಟು ಆಯ್ಕೆ ಮಾಡಲು ಅವಕಾಶಗಳಿರುತ್ತದೆ. ಈ ವೇಳೆ 20% ರಷ್ಟು ಸೀಟುಗಳು ಉಚಿತವಾಗಿ ಲಭ್ಯವಾಗುತ್ತಿದ್ದರೆ, ಉಳಿದ ಸೀಟುಗಳಿಗೆ ಹೆಚ್ಚುವರಿ ಶುಲ್ಕ ನೀಡಬೇಕಿತ್ತು. ಇದೀಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಗೊಂಡಿದ್ದು, ಶೇ. 60ರಷ್ಟು ಸೀಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಪ್ರಯಾಣಿಕರಿಗೆ ಸಂಪೂರ್ಣ ಉಚಿತವಾಗಿ ಆಯ್ಕೆ ಮಾಡಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ.

ಇಲ್ಲಿ ಪ್ರಯಾಣಿಕ ಒಂದು ಸಂಖ್ಯೆ ಅಡಿಯಲ್ಲಿ ಗುಂಪು ಟಿಕೆಟ್ ಕಾಯ್ದಿರಿಸಿದ್ದರೆ, ಆ ಪ್ರಯಾಣಿಕರಿಗೆ ಒಟ್ಟಿಗೆ ಸೀಟುಗಳನ್ನು ಒದಗಿಸಬೇಕು. ಇದರಿಂದ ಎಲ್ಲರೂ ಒಟ್ಟಾಗಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ತಿಳಿಸಿದೆ.

ಇದರ ಜೊತೆಗೆ ಕ್ರೀಡಾ ಉಪಕರಣಗಳು ಮತ್ತು ಸಂಗೀತ ವಾದ್ಯಗಳನ್ನು ಸುರಕ್ಷಿತವಾಗಿ ಸಾಗಿಸಲು ಸೂಕ್ತ ನಿಯಮ ಜಾರಿಗೆ ತರಲು ಮುಂದಾಗಿದೆ. ಅದರ ಜೊತೆ ವಿಮಾನ ವಿಳಂಬ, ರದ್ದತಿ ಮತ್ತು ಬೋರ್ಡಿಂಗ್ ನಿರಾಕರಣೆಯಂತಹ ಸಂದರ್ಭಗಳಲ್ಲಿ ಪ್ರಯಾಣಿಕರ ಮೌಲ್ಯಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ.

ಈ ವೇಳೆ ವೆಬ್‌ಸೈಟ್‌ಗಳು, ಮೊಬೈಲ್, ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಈ ಕುರಿತು ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಗಳನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಿದೆ.

Must Read