July 16, 2026
Thursday, July 16, 2026
spot_img

ಯುಗಾದಿ | ಬೇವು-ಬೆಲ್ಲದ ಸವಿಯಲ್ಲಿದೆ ಜೀವನದ ಪಾಠ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಮತ್ತೆ ಯುಗಾದಿ ಬಂದಿದೆ, ಇಂದು ಹೊಸ ವರುಷದ ಸುದಿನ. ನಮ್ಮ ಇಡೀ ವರುಷ ಸಿಹಿ ಕಹಿಯಂತೆ ಸಮವಾಗಿರಲಿ ಎಂದು ತಿನ್ನುವ ಬೇವು-ಬೆಲ್ಲ. ಇದು ಕೇವಲ ತಿನ್ನುವ ಪದಾರ್ಥವಲ್ಲ, ಬದುಕಿನ ದರ್ಶನ. ಬೇವು-ಬೆಲ್ಲ ತಿಂದಾಗ ನಾಲಿಗೆಯಲ್ಲಿ ಸಿಗುವ ಕಹಿ- ಸಿಹಿ, ವರ್ಷಪೂರ್ತಿ ನಮ್ಮ ಜೀವನದಲ್ಲಿ ಎದುರಾಗುವ ಭಾವನೆಗಳ ನೆನಪನ್ನು ಕೊಡುತ್ತದೆ. ಸಂತೋಷದ ಕ್ಷಣಗಳು ಬೆಲ್ಲದಂತೆ ಸಿಹಿಯಾಗಿದ್ದರೆ, ಸವಾಲುಗಳು ಬೇವಿನಂತೆ ಕಹಿಯಾಗಿರುತ್ತವೆ. ಎರಡನ್ನೂ ಒಟ್ಟಿಗೆ ಸ್ವೀಕರಿಸಿದಾಗಲೇ ಜೀವನ ಸಮತೋಲನವಾಗುತ್ತದೆ ಎಂಬ ಅರ್ಥ ಈ ಸಂಪ್ರದಾಯದೊಳಗೆ ಅಡಗಿದೆ.

ಇದರ ಹಿಂದೆ ವೈಜ್ಞಾನಿಕ ಅಂಶವೂ ಇದೆ. ವಸಂತ ಋತುವಿನ ಆರಂಭದಲ್ಲಿ ದೇಹದಲ್ಲಿ ಉಂಟಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಬೇವು ಎಲೆಗಳು ದೇಹವನ್ನು ಶುದ್ಧಿಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬೆಲ್ಲ ದೇಹಕ್ಕೆ ತಕ್ಷಣದ ಶಕ್ತಿ ನೀಡುವ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೀಗಾಗಿ ಬೇವು-ಬೆಲ್ಲ ಮಿಶ್ರಣ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಉಪಯುಕ್ತ.

ಇದನ್ನೂ ಓದಿ:

ಆಧ್ಯಾತ್ಮಿಕವಾಗಿ ನೋಡಿದರೆ, ಇದು ಸ್ವೀಕಾರದ ಪಾಠ. ಬದುಕು ಯಾವ ರೂಪದಲ್ಲೇ ಬಂದರೂ ಅದನ್ನು ಅರ್ಥಮಾಡಿಕೊಳ್ಳಿ, ಸ್ವೀಕರಿಸಿ ಮುಂದೆ ಸಾಗು ಎಂಬ ಸಂದೇಶವನ್ನು ಈ ಸಣ್ಣ ಆಚರಣೆ ನೀಡುತ್ತದೆ. ಯುಗಾದಿ ದಿನದ ಈ ಸರಳ ಸಂಪ್ರದಾಯ, ಜೀವನದ ದೊಡ್ಡ ಸತ್ಯವನ್ನು ಮೃದುವಾಗಿ ಹೇಳುತ್ತದೆ ಸಿಹಿ ಮಾತ್ರವಲ್ಲ, ಕಹಿಯೂ ಜೀವನದ ಅವಿಭಾಜ್ಯ ಭಾಗವೇ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !