September 18, 2026
Friday, September 18, 2026
spot_img

ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಇನ್ಮುಂದೆ ದುಬಾರಿ: ಸೆ.30ರಿಂದ ಟಿಕೆಟ್ ಮೇಲೆ ಹೆಚ್ಚುವರಿ ಸೆಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ನೋಡೋಕೆ ಥಿಯೇಟರ್‌ಗೆ ಹೋಗೋ ಪ್ರೇಕ್ಷಕರ ಜೇಬಿಗೆ ಇನ್ಮುಂದೆ ಹೆಚ್ಚುವರಿ ಹೊರೆ ಬೀಳುವ ಎಲ್ಲಾ ಲಕ್ಷಣಗಳು ಕಾಣ್ತಿವೆ.

ಕರ್ನಾಟಕದಲ್ಲಿ ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್‌ಗಳ ಮೇಲೆ ಗರಿಷ್ಠ 2% ಹೆಚ್ಚುವರಿ ಸೆಸ್ ಜಾರಿಗೆ ಬರಲಿದ್ದು, ಇದರ ಪರಿಣಾಮ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಪ್ರತಿ ಟಿಕೆಟ್‌ಗೆ ನಿಖರವಾಗಿ ಎಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಸಿನಿಮಾ ಟಿಕೆಟ್‌ಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸುವ ನಿರ್ಧಾರಕ್ಕೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಕಳವಳ ವ್ಯಕ್ತಪಡಿಸಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮರಳಿ ಸೆಳೆಯಲು ಉದ್ಯಮ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮತ್ತೊಂದು ತೆರಿಗೆ ವಿಧಿಸುವುದರಿಂದ ಸಿನಿಮಾ ನೋಡೋಡಿಕೆ ಬರುವ ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆಯಾಗಬಹುದು ಎಂದು ಸಂಘಟನೆ ಹೇಳಿದೆ.

ಇದನ್ನೂ ಓದಿ:

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಕಮಲ್ ಜಿಯಾಂಚಂದಾನಿ, ಸಿನಿಮಾ ಕುಟುಂಬಗಳು ಮತ್ತು ಯುವಜನರು ಸೇರಿದಂತೆ ಕೋಟ್ಯಂತರ ಜನರು ಬಳಸುವ ಮನರಂಜನಾ ಮಾಧ್ಯಮ. ಪ್ರತಿಯೊಂದು ಹೆಚ್ಚುವರಿ ತೆರಿಗೆಯೂ ಚಿತ್ರಮಂದಿರಕ್ಕೆ ತೆರಳುವ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಪಾಲುದಾರರೊಂದಿಗೆ ಈ ವಿಚಾರದಲ್ಲಿ ಚರ್ಚೆ ಮುಂದುವರಿಸುವುದಾಗಿ ಸಂಘಟನೆ ತಿಳಿಸಿದೆ.

ಇತ್ತ ಸೆಸ್ ಜಾರಿಗೆ ಬಂದ ಬಳಿಕ ಟಿಕೆಟ್ ದರದ ಅಂತಿಮ ಪರಿಣಾಮ ಹೇಗಿರಲಿದೆ ಎಂಬುದು ಚಿತ್ರಮಂದಿರಗಳು ಮತ್ತು ಟಿಕೆಟ್ ದರ ನಿಗದಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರಲಿದೆ. ಹೀಗಾಗಿ ಸೆಪ್ಟೆಂಬರ್ 30ರ ಬಳಿಕ ಸಿನಿಮಾ ವೀಕ್ಷಣೆಯ ಖರ್ಚಿನಲ್ಲಿ ಆಗುವ ಬದಲಾವಣೆಯತ್ತ ಪ್ರೇಕ್ಷಕರ ಗಮನ ನೆಟ್ಟಿದೆ. ಹೊಸ ಸೆಸ್ ಒಂದೆಡೆ ಸರ್ಕಾರಕ್ಕೆ ಹೆಚ್ಚುವರಿ ಆದಾಯದ ಮೂಲವಾಗುವ ಸಾಧ್ಯತೆ ಹೊಂದಿದ್ದರೆ, ಮತ್ತೊಂದೆಡೆ ಅದರ ಪರಿಣಾಮ ಗ್ರಾಹಕರು ಮತ್ತು ಚಿತ್ರಮಂದಿರ ಉದ್ಯಮದ ಮೇಲೆ ಹೇಗಿರಲಿದೆ ಎಂಬ ಚರ್ಚೆಯೂ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar