ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ಗೆ ಯುಗಾದಿ ಸಂದರ್ಭದಲ್ಲೇ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ.
ಹೌದು! ಬಿಸಿಸಿಐ ಇವರಿಬ್ಬರ ವಾರ್ಷಿಕ ವೇತನ ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಇತ್ತೀಚೆಗೆ ಪ್ರಕಟಿಸಿದ ನೂತನ ಕೇಂದ್ರ ಒಪ್ಪಂದದಲ್ಲಿ ಎ+ ಗ್ರೇಡ್ ರದ್ದಾದ ಕಾರಣ ಕೆಲ ಆಟಗಾರರ ಸಂಬಳ ಕುಂಠಿತಗೊಂಡಿತ್ತು. ಮೊದಲು ಎ+ ವಿಭಾಗದಲ್ಲಿದ್ದ ಬುಮ್ರಾ ವರ್ಷಕ್ಕೆ 7 ಕೋಟಿ ರೂ. ಪಡೆದರೆ, ಈಗ ಎ ಗ್ರೇಡ್‌ಗೆ ಇಳಿದು 5 ಕೋಟಿ ರೂ. ಪಡೆಯುತ್ತಿದ್ದಾರೆ. ಅವರ ಪ್ರದರ್ಶನವನ್ನು ಗಮನಿಸಿ ಈ ಕಡಿತವನ್ನು ಸರಿಪಡಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ:
ಇನ್ನೊಂದೆಡೆ, ಟಿ20 ತಂಡದ ಉಪನಾಯಕ ಅಕ್ಷರ್ ಪಟೇಲ್ ಪ್ರಸ್ತುತ ಸಿ ಗ್ರೇಡ್‌ನಲ್ಲಿ ಇದ್ದು 1 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಅವರಿಗೂ ವೇತನ ಹೆಚ್ಚಳ ಸಿಗಬಹುದು ಎಂಬ ನಿರೀಕ್ಷೆ ಇದೆ.
ಹೊಸ ಒಪ್ಪಂದದಲ್ಲಿ ಎ ಗ್ರೇಡ್‌ನಲ್ಲಿ ಶುಭಮನ್ ಗಿಲ್, ಬುಮ್ರಾ, ರವೀಂದ್ರ ಜಡೇಜಾ ಇದ್ದರೆ, ಬಿ ಮತ್ತು ಸಿ ಗ್ರೇಡ್‌ಗಳಲ್ಲಿ ಹಲವಾರು ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ.



