March 19, 2026
Thursday, March 19, 2026
spot_img

CINE | ‘ಧುರಂಧರ್ 2’ ಭರ್ಜರಿ ಆರಂಭ: ಪ್ರೀಮಿಯರ್‌ನಲ್ಲೇ ಇಷ್ಟೊಂದು ಗಳಿಕೆನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಗೂ ಮುನ್ನವೇ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಧುರಂಧರ್ 2 ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಗಮನ ಸೆಳೆದಿದೆ. ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ನಡೆದ ವಿಶೇಷ ಪ್ರದರ್ಶನಗಳಲ್ಲಿ ಅನೇಕರು ಸಿನಿಮಾ ವೀಕ್ಷಿಸಿ, ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಭಾಗದ ಯಶಸ್ಸಿನಿಂದಲೇ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈಗ ಪ್ರೀಮಿಯರ್ ಶೋಗಳಿಂದಲೇ ಸುಮಾರು 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದ್ದು, ಇದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಈ ಮೊದಲು ಒಜಿ ಸಿನಿಮಾ ಪ್ರೀಮಿಯರ್ ಮೂಲಕ ಗಳಿಸಿದ್ದ ದಾಖಲೆಯನ್ನು ಈ ಚಿತ್ರ ಮುರಿದಿದೆ.

ಇದನ್ನೂ ಓದಿ:

ಯುಗಾದಿ ರಜೆಯ ಹಿನ್ನೆಲೆ ಇಂದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಮುಂಗಡ ಬುಕ್ಕಿಂಗ್ ಕೂಡ ಜೋರಾಗಿದ್ದು, ಮೊದಲ ದಿನವೇ 200-300 ಕೋಟಿ ರೂಪಾಯಿ ಗಳಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್ ಪಾಲ್ ಮತ್ತು ಸಂಜಯ್ ದತ್ ನಟನೆಯ ಈ ಚಿತ್ರಕ್ಕೆ ಆದಿತ್ಯ ಧಾರ್ ನಿರ್ದೇಶನ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !